CM Siddharamaiah ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಐವರು ಬಾಣಂತಿಯರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ 7ರಿಂದ 11ರ ಅವಧಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗರ್ಭಿಣಿಯರ ಪೈಕಿ ಲಲಿತಮ್ಮ, ನಂದಿನಿ, ರೋಜಾ, ಮುಸ್ಕಾನ್ ಹಾಗೂ ಸುಮಯ್ಯ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರಚಿಸಿದ್ದ ತನಿಖಾ ತಂಡ, ‘ಸರಣಿ ಸಾವಿಗೆ ಸರಕಾರದಿಂದ ಸರಬರಾಜು ಮಾಡಿದ ಐವಿ ಫೂಯಿಡ್ ಕಾರಣ’ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರಕಾರ ಪಶ್ಚಿಮ ಬಂಗಾ ಫಾರ್ಮಸ್ಯುಟಿಕಲ್ ಕಂಪನಿಯಿಂದ ಸರಬರಾಜು ಆಗಿದ್ದ ಐವಿ ಫೂಯಿಡ್ ಬಳಕೆ ಮಾಡದಂತೆ ನ.16 ರಂದು ಆದೇಶ ಹೊರಡಿಸಿತ್ತು.
CM Siddharamaiah ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಭಾನುವಾರ ಹಮ್ಮಿಕೊಂಡಿದ್ದ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡಿದರು.
ಅಲ್ಲದೆ, ಮೃತ ಕುಟುಂಬಗಳಿಗೆ ತಲಾ 2ಲಕ್ಷ ರೂ. ಪರಿಹಾರ ಘೋಷಿಸಿತ್ತು.