Government of Bangladesh ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯಕ್ಕೆ ನೀಡುತ್ತಿರುವ ಕಿರುಕುಳ ಇನ್ನೂ ನಿಂತಿಲ್ಲ. ಭಾರತ ಸರ್ಕಾರವೂ ಸರಿಯಾಗಿ ಬಾಂಗ್ಲಾ ದೇಶದ ಸರ್ಕಾರಕ್ಕೆ ಬಿಸಿಮುಟ್ಟಿಸಿದರೂ ಏನೂ ಅಗಿಲ್ಲ.
ಈಗ ಬಾಂಗ್ಲಾದೇಶ ಸರ್ಕಾರವು ರಾಷ್ಟ್ರಪಿತ ಮುಜಿಬುರ್ ರೆಹಮಾನ್ ಅವರ ಚಿತ್ರವನ್ನು ಕರೆನ್ಸಿ ನೋಟುಗಳಿಂದ ತೆಗೆದುಹಾಕಲೂ ಮುಂದಾಗಿದೆಯಂತೆ.
ಪೂರ್ವ ಪಾಕಿಸ್ತಾನವಾಗಿ ನರಳುತ್ತಿದ್ದ ಈ ಪ್ರದೇಶದ ಸ್ವಾತಂತ್ರ್ಯಕ್ಕೆ ಭಾರತ ನೀಡಿದ ನೆರವು ಕಡಿಮೆಯೇನಲ್ಲ. ಆದರೂ ಈಗ ಭಾರತೀಯ ಹಿಂದೂ ಸಮುದಾಯಕ್ಕೆ ಅಲ್ಲಿ ಶಾಂತಿ ನೆಮ್ಮದಿ ಸಿಗದಂತಾಗಿದೆ.
Government of Bangladesh ಬಾಂಗ್ಲಾದೇಶ ಮತ್ತೆ ಪೂರ್ವ ಪಾಕಿಸ್ತಾನವಾಗುವ ಹಾದಿಯಲ್ಲಿದೆ ಎಂದು ರಾಜಕೀಯ ಪರಿಣಿತರ ಅಂಬೋಣ. ಒಟ್ಟಿನಲ್ಲಿ ಈಗ ಬಾಂಗ್ಲಾದೇಶ ಹಿಂದೂಗಳಿಗೆ ಅಸುರಕ್ಷಿತ ರಾಷ್ಟ್ರವಾಗುತ್ತಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಕೂಡ ಬಾಂಗ್ಲಾದೇಶದ ಆರ್ಥಿಕತೆಯನ್ನು ಹಿಂದೆಂದಿಗಿಂತಲೂ ನಾಶಪಡಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಪುಟ್ಟ ದೇಶದಲ್ಲಿ ಹಿಂದೂಗಳ ಭದ್ರತೆ ಬಗ್ಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳು ಗಂಭೀರ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಸರ್ಕಾರದ ಗಮನ ಸೆಳೆಯಲು ನಡೆಯುತ್ತಿರುವ ಆಂದೋಳನಗಳು
ಮಂದವಾಗಿವೆ.
ಲೋಕಸಭೆಯಲ್ಲಿ ಕೇಂದ್ರದ ವಿದೇಶಾಂಗ ಮಂತ್ರಿ ಜೈಶಂಕರ್ ಅವರು ಸಂಸದರೊಭ್ಬರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರದ ಆಯ್ದಭಾಗ ಇಲ್ಲಿ ಪ್ರಸ್ತುತವಾಗಿದೆ.
ಆಯ್ದಭಾಗ:
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ದುರ್ಗಾಪೂಜಾ ಉತ್ಸವದ ಸಂದರ್ಭದಲ್ಲಿ ದೇವಾಲಯಗಳು ಮತ್ತು ಪೂಜಾ ಮಂಟಪಗಳ ಮೇಲೆ ದಾಳಿಯ ವರದಿಗಳು ಸಹ ಬೆಳಕಿಗೆ ಬಂದಿವೆ. ಢಾಕಾದ ತಂತಿಬಜಾರ್‌ನಲ್ಲಿನ ಪೂಜಾ ಮಂಟಪದ ಮೇಲಿನ ದಾಳಿ ಮತ್ತು 2024 ರ ದುರ್ಗಾ ಪೂಜೆಯ ಸಮಯದಲ್ಲಿ ಸತ್ಖಿರಾದ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಕಳ್ಳತನದ ಬಗ್ಗೆ ಸರ್ಕಾರ ತನ್ನ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ಈ ದಾಳಿಯ ನಂತರ, ಬಾಂಗ್ಲಾದೇಶ ಸರ್ಕಾರವು ಸೇನೆಯ ನಿಯೋಜನೆ ಸೇರಿದಂತೆ ವಿಶೇಷ ಭದ್ರತೆಯನ್ನು ಒದಗಿಸಲು ಸೂಚನೆಗಳನ್ನು ನೀಡಿತ್ತು ಮತ್ತು ದುರ್ಗಾ ಪೂಜೆಯ ಶಾಂತಿಯುತ ಆಚರಣೆಗಳನ್ನು ಖಚಿತಪಡಿಸಿಕೊಳ್ಳಲು
ಢಾಕಾದಲ್ಲಿರುವ ಭಾರತದ ಹೈಕಮಿಷನ್ ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ. ಅಲ್ಪಸಂಖ್ಯಾತರು ಸೇರಿದಂತೆ ಬಾಂಗ್ಲಾದೇಶದ ಎಲ್ಲಾ ನಾಗರಿಕರ ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಯ ಪ್ರಾಥಮಿಕ ಜವಾಬ್ದಾರಿಯು ಬಾಂಗ್ಲಾದೇಶದ ಸರ್ಕಾರದ ಮೇಲಿದೆ.
ಇಷ್ಟೆಲ್ಲ ಆದರೂ ಬಾಂಗ್ಲಾ ದೇಶ್ ಅಧ್ಯಕ್ಷರು ಮಾಧ್ಯಮಗಳಲ್ಲಿ ಭರವಸೆಯ ಮಾತಾಡಿದ್ದಾರೆ ಅಷ್ಟೆ. ಹಿಂದೂಗಳ ರಕ್ಷಣೆಯ ಬಗ್ಗೆ ಗಂಭೀರ ಕ್ರಮ ಕೈಗೊಂಡಿರುವ ಬಗ್ಗೆ
ಸುದ್ದಿಯೇ ಇಲ್ಲ.