Thursday, December 18, 2025
Thursday, December 18, 2025

Kuvempu University ಸಂವಿಧಾನ ಹೊರತುಪಡಿಸಿ ನಮ್ಮನ್ನು ರಕ್ಷಿಸುವ ಯಾವ ಶಕ್ತಿಯೂ ದೇಶದಲ್ಲಿಲ್ಲ- ಡಾ.ಸಣ್ಣರಾಮ

Date:

Kuvempu University ದಲಿತ ಸಮುದಾಯದ ಮಕ್ಕಳ ಎಳೆ ಮನಸ್ಸಿನಲ್ಲಿ ಸನಾತನ ಧರ್ಮದ ವಿಷ ಬೀಜ ಬಿತ್ತುವ ಮುನ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆಗಳನ್ನು ಬಿತ್ತಿ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರೊಫೆಸರ್ ಡಾ. ಸಣ್ಣ ರಾಮ ರವರು ಹೇಳಿದರು.

ಶಿವಮೊಗ್ಗ ನಗರದ ಬಿ. ಎಚ್ .ರಸ್ತೆಯಲ್ಲಿರುವ ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ೬೮ನೇ ಮಹಾ ಪರಿನಿರ್ವಹಣಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಲಿತರು ರಾಷ್ಟ್ರಪತಿ ಕುರ್ಚಿಯಲ್ಲಿ ಕೂರಬಹುದು ಅದಕ್ಕೆ ಕಾರಣ ಸಂವಿಧಾನ.ಅದೇ ದಲಿತರು ದೇವಸ್ಥಾನದ ಒಳಗೆ ಹೋಗುವುದಕ್ಕೆ ಆಗುವುದಿಲ್ಲ ಅದೇ ಹಿಂದುತ್ವ ಎಂದು ಹೇಳಿದರಲ್ಲದೆ ದಲಿತರು ಬದಲಾಗದಿದ್ದರೆ ಸಂವಿಧಾನ ಬದಲಾಗುತ್ತದೆ ಸಂವಿಧಾನ ಹೊರತುಪಡಿಸಿ ನಮ್ಮನ್ನು ರಕ್ಷಿಸುವ ಯಾವ ಶಕ್ತಿಯು ದೇಶದಲ್ಲಿ ಇಲ್ಲ ಎಂದು ಡಾ ಸಣ್ಣರಾಮ ರವರು ಹೇಳಿದರು.

Kuvempu University ವೇದಿಕೆಯಲ್ಲಿ ಶಿವಬಸಪ್ಪ ನಿವೃತ್ತ ಪ್ರಾಂಶುಪಾಲರು ಭದ್ರಾವತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂ ಏಳು ಕೋಟಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಬೊಮ್ಮನಕಟ್ಟೆ ಕೃಷ್ಣ, ಮಾಜಿ ಜಿಲ್ಲಾ ಸಂಚಾಲಕರಾದ ಎ ಅರ್ಜುನ್, ನಗರ ಸಂಚಾಲಕರಾದ ಹರಿಗೆ ರವಿ, ಭದ್ರಾವತಿ ರಾಜಶೇಖರ್, ನಲ್ಲೂರು ಶಿವು ಮೊದಲಾದವರು ಉಪಸ್ಥಿತರಿದ್ದರು ಸಭೆಯ ಅಧ್ಯಕ್ಷತೆಯನ್ನು ಪ್ರೊ. ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...