Sulthan Diamonds and Gold ದಕ್ಷಿಣ ಭಾರತದ ಅತಿ ದೊಡ್ಡ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ “ವಿಶ್ವ ವಜ್ರ ಪ್ರದರ್ಶನ”ವನ್ನು ಶಿವಮೊಗ್ಗ ನಗರದ ಗೋಪಿ ವೃತ್ತದ ಬಳಿ ಇರುವ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ನಲ್ಲಿ ಉದ್ಘಾಟಿಸಲಾಯಿತು.
ಡಿಸೆಂಬರ್ 5 ರಿಂದ 15 ರವರೆಗೆ 10 ದಿನಗಳ ಕಾಲ ನಡೆಯುವ ಈ ಪ್ರದರ್ಶದನಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಸಿದ್ಧ ಆಭರಣ ಮತ್ತು ವಜ್ರವನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಇದನ್ನು ಖರೀಸಿದವರಿಗೆ ಫ್ಲಾಟ್ 8 ಸಾವಿರ ರೂ. ರಿಯಾಯತಿಯನ್ನೂ ಸಹ ಘೋಷಿಸಲಾಗಿದೆ.
ವಿವಿಧ ದೇಶಗಳ ಆಭರಣವನ್ನು ಮಹಿಳಾ ಉದ್ಯಮಿಗಳಾದ ಜಯಲಕ್ಷ್ಮೀ ಸ್ಟೀಲ್ ಕಾರ್ಪೊರೇಶನ್‌ನ ಜೆ ಕೆ ಶಶಿಕಲಾ, ಹೊಸನಗರ ಸರಕಾರಿ ಆಸ್ಪತೆಯ ಕಣ್ಣು ತಜ್ಞೆ ಡಾ|| ಶಂಶಾದ್ ಬೇಗಂ, ಎಸ್ ಎ ಫ್ಲವರ್ ಮತ್ತು ಡೆಕೋರೇಶನ್‌ನ ಮಾಲಕಿ ಶೆರ್ಲಿ ಕ್ಲೆಮೆಂಟ್, ಶಕ್ತಿ ಇನೋವೇಶನ್‌ನ ಸಿಇಓ ಶಿಲ್ಪಾ ಗೋಪಿನಾಥ, ಉದ್ಯಮಿ ಎಸ್ ಎಚ್ ಗಾಯತ್ರಿ, ರೂಪದರ್ಶಿ ಕೀರ್ತಿ ಶಿವಮೂರ್ತಿ ಮತ್ತು ಮೇಕಪ್ ಆರ್ಟಿಸ್ಟ್ ದೀನಾಜ್ ಅಯೂಮ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಲ್ಪಾ ಗೋಪಿನಾಥ್, ಇದೊಂದು ಅದ್ಭುತವಾದ ಆಭರಣಗಳ ಪ್ರದರ್ಶನವಾಗಿದ್ದು., ಹಿಂದೆಂದೂ ನೋಡಿರದ ಅಪೂರ್ವ ಸಂಗ್ರಹ ಇಲ್ಲಿದೆ. ಮಹಿಳೆಯರು ಇಷ್ಟಪಡುವ ಮತ್ತು ಮನ ಆಕರ್ಷಿಸುವ ಆಭರಣಗಳು ಇವಾಗಿದ್ದು, ಗ್ರಾಹಕರು ನಿಶ್ಚಿತವಾಗಿಯೂ ಇಷ್ಟಪಡುತ್ತಾರೆ ಎಂದರು.
Sulthan Diamonds and Gold ರೂಪದರ್ಶಿ ಕೀರ್ತಿ ಶಿವಮೂರ್ತಿ ಮಾತನಾಡಿ, ಹಿಂದೆಂದೂ ನೋಡಿರದ ವಜ್ರಾಭರಣಗಳ ಸಂಗ್ರಹ ಶಿವಮೊಗ್ಗದಂತಹ ನಗರದಲ್ಲಿ ನಡೆಯುತ್ತಿರುವುದು ನಗರದ ಗ್ರ್ರಾಹಕರ ಪಾಲಿಗೆ ವಿಶಿಷ್ಟವಾಗಿದೆ. ಮಹಿಳೆಯರು ವಿಶೇಷವಾಗಿ ಆಭರಣಪ್ರಿಯರು ಇದರ ಲಾಭ ಪಡೆಯಬೇಕು. ವಿದೇಶಿ ಆಭರಣಗಳ ಸಂಗ್ರಹವನ್ನು ಒಂದೇ ಸೂರಿನಡಿ ನೋಡು, ಖರೀದಿಸು ವ್ಯವಸ್ಥೆ ಮಾಡಿರುವುದು ಮೆಚ್ಚತಕ್ಕದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಟೋರ್ ಮ್ಯಾನೇಜರ್ ಅಜಿತ್ ಮತ್ತು ಶೋಯೆಬ್, ಅನೇಕ ಗ್ರಾಹಕರು ಹಾಜರಿದ್ದರು.