Shivamogga District Police ಶಿವಮೊಗ್ಗ ಜಿಲ್ಲಾ ಪೋಲೀಸ್ ಕ್ರೀಡಾಕೂಟದ ಭಾಗವಾಗಿ ಇಂದು ಮಧ್ಯಾಹ್ನ ಪೋಲೀಸ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪೋಲೀಸ್ ಹಾಗೂ ಪತ್ರಕರ್ತರ ನಡುವಿನ ಪಂದ್ಯಾವಳಿ, ಕ್ರೀಡಾ ಸ್ಪೂರ್ತಿಗೆ ಸಾಕ್ಷಿಯಾಗಿದ್ದು, ಪೋಲೀಸ್ ಹಾಗೂ ಪತ್ರಕರ್ತರು ಅತ್ಯಂತ ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ತಲಾ ಹತ್ತು ಓವರ್‌ಗಳ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನಾಯಕತ್ವದ ಜಿಲ್ಲಾ ಪೋಲೀಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೧೩೪ ರನ್ ಕಲೆ ಹಾಕಿತು.
ಈ ೧೩೪ ರನ್‌ನ್ನು ಬೆನ್ನು ಹತ್ತಿದ ಪತ್ರಕರ್ತರ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡು ೬೭ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಪೋಲೀಸ್ ತಂಡದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ೧೭ ರನ್ ಗಳಿಸಿದರೆ, ಉಪಾಧೀಕ್ಷಕ ಗಜಾನನ ಸುತಾರ ೧೨, ಇನ್ಸ್ಪೆಕ್ಟರ್ ಅಣ್ಣಯ್ಯ ೩೬, ನಾರಾಯಣ ಸ್ವಾಮಿ ೧೯ ಹಾಗೂ ಪ್ರಶಾಂತ್ ೩೨ರನ್ ಗಳಿಸಿದರು.
ಪತ್ರಕರ್ತರ ತಂಡದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ. ವಿ. ಶಿವಕುಮಾರ್‌ರವರು ಜಿಲ್ಲಾ ರಕ್ಷಣಾಧಿಕಾರಿಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಲ್ಲದೇ ೨೦ ರನ್ ಗಳಿಸಿ, ಗಮನ ಸೆಳೆದರು. ಪವರ್ ಟೀವಿಯ ಗೋ. ವ. ಮೋಹನ ಕೃಷ್ಣ ೧೪ರನ್ ಗಳಿಸಿದರು. ಈ ಇಬ್ಬರೂ ಆಟಗಾರರು ಅಜೇಯರಾಗಿ ಉಳಿದರು.
ಜಗದೀಶ್ ೦೩, ಸತೀಶ್ ೦, ರಾಜೇಶ್ ೩, ವೆಂಕಟೇಶ್ ೦, ನಾಗರಾಜ್ ೧, ಮಹೇಶ್ ೨, ಗಣೇಶ್ ೦ ರನ್ ಗಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್‌ರವರು ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು.
Shivamogga District Police ವಿಜಯಿಯಾದ ಜಿಲ್ಲಾ ಪೋಲೀಸ್ ತಂಡಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ ಬಹುಮಾನ ಸ್ಮರಣಿಕೆ ನೀಡಿದರು.
ಪತ್ರಕರ್ತರಾದ ಹುಲಿಮನೆ ತಿಮ್ಮಪ್ಪ, ಗೋಪಾಲ್ ಯಡಗೆರೆ, ವೈದ್ಯನಾಥ್, ಜೇಸುದಾಸ್, ಕಿರಣ್ ಕಂಕಾರಿ, ನಾಗರಾಜ ನೇರಿಗೆ, ವಿ. ಟಿ. ಅರುಣ್, ಜಗದೀಶ್ ಅಮೋಘ ಮೊದಲಾದವರು ಉಪಸ್ಥಿತರಿದ್ದರು.-