Thursday, December 19, 2024
Thursday, December 19, 2024

Kuvempu University ಯುವಜನೋತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಜ್ಞಾನಮಟ್ಟ ಹೆಚ್ಚಿಸಿಕೊಳ್ಳಬೇಕು-ಪ್ರೊ.ಎಸ್.ಗೋಪಿನಾಥ್

Date:

Kuvempu University ವಿಜ್ಞಾನ ಯುವ ಜನತೆಗೆ ದಾರಿದೀಪ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಮತ್ತು ವಿಜ್ಞಾನದ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ(ಮೌಲ್ಯಮಾಪನ) ಪ್ರೊ. ಗೋಪಿನಾಥ್ ಎಸ್. ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಶಿವಮೊಗ್ಗ, ಹಾಗೂ ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ವಿಜ್ಞಾನ ಕಾಲೇಜು,ಶಿವಮೊಗ್ಗ ರಾಷ್ಟ್ರಿಯ ಸೇವಾ ಯೋಜನೆ ಇವರುಗಳ ಸಹಯೋಗದಲ್ಲಿ “ಜಿಲ್ಲಾ ಮಟ್ಟದ ಯುವಜನೋತ್ಸವ”ದ ಅಂಗವಾಗಿ ಹಮ್ಮಿಕೊಂಡ ವಿಜ್ಞಾನ ಮೇಳ ಮತ್ತು ಯುವ ಕೃತಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಅಧ್ಯಯನ ಮಾಡುವ ವಿಜ್ಞಾನದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೊ. ಶುಭಾ ಮರವಂತೆ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಬರುವ “ಮೈಭಾರತ್ ಪೊರ್ಟಲ್ ಮತ್ತು “ಯುವ ಸ್ಪಂದನ” “ಯುವ ಕಣಜ” ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಳ್ಳುವ ಮೂಲಕ ತನ್ನ ಅನನ್ಯತೆಯನ್ನು ರಾಜ್ಯ,ರಾಷ್ಟ್ರ ಅಷ್ಟೇ ಅಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಪಡೆದಿದೆ ಎಂದರು.

Kuvempu University ಕಾರ್ಯಕ್ರಮದ ಸಂಚಾಲಕರಾದ ಕಾಲೇಜಿನ ರಾ.ಸೇ.ಯೋ ಘಟಕ 1ರ ಅಧಿಕಾರಿಗಳಾದ ಡಾ. ಹಾ. ಮ ನಾಗಾರ್ಜುನ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನದ ಸಂಶೋಧನಾತ್ಮಕ ವಸ್ತು ಪ್ರದರ್ಶನ ಮತ್ತು ಮೇಳಗಳು ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ ಮತ್ತು ಸ್ಪರ್ಧಾಮನೋಬಾವವನ್ನು ಇಮ್ಮಡಿಗೊಳಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸ್ಪರ್ಧಿಸಲು ಅಧ್ಯಾಪಕರು ಮಾರ್ಗದರ್ಶಕರಾಗಿ ಬೆಂಬಲಿಸಿದಾಗ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಸಾದ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ ರಾಜೇಶ್ವರಿ ಎನ್ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೆಹರು ಯುವ ಕೇಂದ್ರದ ಯುವ ಅಧಿಕಾರಿಗಳಾದ ಉಲ್ಲಾಸ ಕೆ. ಟಿ. ಕೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ರಾ.ಸೇ.ಯೋ ಅಧಿಕಾರಿಗಳಾದ ಅರುಣಕುಮಾರ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ರೇಖ್ಯಾನಾಯ್ಕ್ ಅವರು ವಂದಿಸಿದರು. ಕುಮಾರಿ ರಶ್ಮಿ ಮೇಘಶ್ರೀ ಪ್ರಾರ್ಥಿಸಿದರು, ಕುಮಾರ ಮೋಹನ್ ಗೌಡ,ಮಂಜುನಾಥ,ಪ್ರಕೃತಿ ನಿರೂಪಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಪ್ರೊ. ನಾಗರಾಜ ಪರಿಸರರವರು ಉಪಸ್ಥಿತರಿದ್ದರು. ವಿಜ್ಞಾನ ಮೇಳದ ತೀರ್ಪುಗಾರರಾಗಿ ಡಾ. ಎಂ.ಎಚ್ ಮೊಹಿನುದ್ದಿನ್ ಖಾನ್, ಡಾ. ಅಮಿತ್ ಕುಮಾರ್, ಪ್ರೊ. ವಿದ್ಯಾಶಂಕರರವರು ಆಗಮಿಸಿದ್ದರು. ವಿಜ್ಞಾನ ಮೇಳದಲ್ಲಿ ತಂಡ ಮತ್ತು ವೈಯಕ್ತಿಕವಾಗಿ ಭಾಗವಹಿಸಿದ್ದಅಭ್ಯರ್ಥಿಗಳಿಗೆ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿಪತ್ರವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashvani Bhadravati ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿತಾಣಗಳ ಚಿತ್ರ ಪ್ರದರ್ಶನ. ಪ್ರವಾಸೋದ್ಯಮಕ್ಕೆ ಬೆಂಬಲ- ಎನ್.ಹೇಮಂತ್

Akashvani Bhadravati ಆಕಾಶವಾಣಿ ಭದ್ರಾವತಿ 60ನೇ ವರ್ಷದ ವಜ್ರ ಮಹೋತ್ಸವ ವರ್ಷಾಚರಣೆ...

Klive Special Article ಕನ್ನಡ – ಒಂದಷ್ಟು ಆತಂಕಗಳು

Klive Special Article ಮತ್ತೊಮ್ಮೆ ಕನ್ನಡದ ನುಡಿ ಜಾತ್ರೆ ಬಂದಿದೆ ....

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ನೋಡಿಕೊಳ್ಳುತ್ತದೆ- ಸಂಸದ ರಾಘವೇಂದ್ರ

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಸದ್ಯಕ್ಕೆ ಬಿ...