PM Narendra Modi ಯುವ ಜನರಿಗೆ ಸನ್ಮಾನ್ಯ ಪ್ರಧಾನಿಯವರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಮತ್ತು ಭಾರತದ ಭವಿಷ್ಯಕ್ಕಾಗಿ ತಮ್ಮನ್ನು ಪ್ರಸ್ತುತ ಪಡಿಸುವ, ರಾಜಕೀಯ ಮತ್ತು ನಾಗರೀಕ ಜೀವನದಲ್ಲಿ ತೊಡಗಿಸಿಕೊಳ್ಳುವಿಕೆಗೆ ಸುವರ್ಣ ಅವಕಾಶವನ್ನು ವಿಕಸಿತ ಭಾರತ್ ಯುವ ನಾಯಕರ ಸಂಭಾಷಣೆ ಕಾರ್ಯಕ್ರಮ ಒದಗಿಸಲಿದೆ.
ದೇಶದ ಎಲ್ಲಾ ಮೂಲೆಗಳಿಂದ ಆದರ್ಶಪ್ರಾಯ ಯುವ ದಾರ್ಶನಿಕರನ್ನು ಗುರುತಿಸುವುದು, ವಿಕಸಿತ ಭಾರತ್ ಬಗ್ಗೆ ಯುವಕರಿಗೆ ಅವರ ದೃಷ್ಟಿಕೋನವನ್ನು ಹಂಚಿಕೊಳ್ಳಲು ಪರಿಣಾಮಕಾರಿ ವೇದಿಕೆ ಒದಗಿಸುವುದು, ಭಾರತೀಯರನ್ನು ಸಶಕ್ತಗೊಳಿಸಲು ಯುವಕರನ್ನು ಚಾಲನೆಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
2025 ರ ಜನವರಿ 11 ಮತ್ತು 12 ರಂದು ರಾಷ್ಟ್ರೀಯ ಯುವ ಉತ್ಸವ ಸಂದರ್ಭದಲ್ಲಿ ‘ವಿಕಸಿತ ಭಾರತ್ ಯುವ ನಾಯಕರ ಸಂವಾದ’ ನಡೆಯಲಿದೆ. ಈ 2 ದಿನದ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿ 3000 ಯುವ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ವಿಕಸಿತ ಭಾರತ್ ಯುವ ನಾಯಕರ ಸಂವಾದ-ರಾಷ್ಟ್ರೀಯ ಯುವ ಉತ್ಸವ 2025 ರಲ್ಲಿ ಮೂರು ಪ್ರಮುಖ ವಿಭಾಗಗಳಲ್ಲಿ ಯುವ ನಾಯಕರ ಕ್ರಿಯಾತ್ಮಕ ಗುಂಪನ್ನು ಮಾಡಲಾಗುವುದು.
PM Narendra Modi ಮೊದಲ ಗುಂಪು ವಿಕಸಿತ್ ಭಾರತ್ ಚಾಲೆಂಜ್‌ನಲ್ಲಿ ಭಾಗವಹಿಸುವವರು, ಎರಡನೇ ಗುಂಪು ಚಿತ್ರಕಲೆ, ವಿಜ್ಞಾನ ಪ್ರದರ್ಶನಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಘೋಷಣೆ ಸ್ಪರ್ಧೆಗಳಲ್ಲಿ ಜಿಲ್ಲಾ, ರಜ್ಯ ಮಟ್ಟದ ಯುವಜನೋತ್ಸವಗಳಿಂದ ಆಯ್ಕೆಯಾದ ಯುವ ಪ್ರತಿಭೆ ಹಾಗೂ ಮೂರನೇ ಗುಂಪು ಉದ್ಯಮಶೀಲತೆ, ಕ್ರೀಡೆ, ಕೃಷಿ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಯುವ ಐಕಾನ್‌ಗಳನ್ನು ಒಳಗೊಂಡಿರುತ್ತದೆ. 3000 ಯುವ ನಾಯಕರ ಪೈಕಿ 1500 ಯುವ ನಾಯಕರನ್ನು ನನ್ನ ಭಾರತ್ ಪ್ಲಾಟ್‌ಫಾರ್ಮ್ನಲ್ಲಿ ವಿಕಸಿತ ಭಾರತ್ ಚಾಲೆಂಜ್‌ನಿಂದಆಯ್ಕೆ ಮಾಡಲಾಗುತ್ತದೆ.
ಒಂದನೇ ಹಂತದಲ್ಲಿ ವಿಕಸಿತ ಭಾರತ್ ಚಾಲೆಂಜ್ ರಸಪ್ರಶ್ನೆ ಕಾರ್ಯಕ್ರಮವು ಭಾರತದ ಹೆಗ್ಗುರುತು ಸಾಧನೆಗಳು ವಿಷಯ ಕುರಿತು ನ.25 ರಿಂದ ಆರಂಭವಾಗಿ ಡಿ.05 ರವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ ವಿಕಸಿತ ಭಾರತ್ ಬ್ಲಾಗ್/ಪ್ರಬಂಧ ಸ್ಪರ್ಧೆ ನಡೆಯಲಿದೆ. ವಿಕಸಿತ ಭಾರತ್ ಚಾಲೆಂಜ್‌ನಲ್ಲಿ ಭಾಗವಹಿಸಲು ಮೈಭಾರತ್ ನಲ್ಲಿ www.mybharat.gov.in ಲಾಗಿನ್ ಆಗಬಹುದು ಎಂದು ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ ಟಿ ಕೆ ತಿಳಿಸಿದ್ದಾರೆ.
PM Narendra Modi ವಿಕಸಿತ ಭಾರತ್ ಯುವ ನಾಯಕರ ಸಂಭಾಷಣೆ: ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ
Date: