Sunday, December 7, 2025
Sunday, December 7, 2025

Akhila Bharatha Sharana Sahitya Parishad ಚಿಂತನಾ ಕಾರ್ತೀಕದಲ್ಲಿ ಶರಣರ ,ಸಾಧಕರ & ಸಾಧುಸಂತರ ವಿಚಾರಗಳ ಅನಾವಣ- ಶ್ರೀಬಸವ ಮರುಳ ಸಿದ್ಧಶ್ರೀ

Date:

Akhila Bharatha Sharana Sahitya Parishad ಬದುಕು ನೆಮ್ಮದಿಯಾಗಿ ಸಾಗಿಸಲು ಮೌಲ್ಯಗಳು ಹಾಗೂ ಸಂಸ್ಕಾರ ತುಂಬಾ ಅಗತ್ಯವಾಗಿರುತ್ತದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ನಗರದ ಗೋಪಾಳದಲ್ಲಿರುವ ಎ.ಎಚ್.ಲೇಔಟ್‌ನಲ್ಲಿರುವ ಡಿ.ಎಂ.ಶಂಕರಪ್ಪ ಅವರ ದೊಡ್ಡಣ್ಣ ನಿವಾಸದಲ್ಲಿ ಆಯೋಜಿಸಿದ್ದ ಚಿಂತನಾ ಕಾರ್ತಿಕದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಜನರಿಗೆ ಜ್ಞಾನದ ಬುತ್ತಿ ನೀಡುವುದರ ಜತೆಗೆ ಮನೆಮನಗಳನ್ನು ಬೆಳಗುತ್ತದೆ. ಜ್ಞಾನದಾಸೋಹದ ಚಿಂತನಾ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಲು ಇಚ್ಛಾಶಕ್ತಿ ಬೇಕಿದೆ ಎಂದು ತಿಳಿಸಿದರು.
ಹದಿನೆಂಟು ವರ್ಷಗಳಿಂದ ಭಕ್ತರ ನೆರವಿನಿಂದ ಚಿಂತನ ಕಾರ್ತಿಕ ಯಶಸ್ವಿಯಾಗಿ ನಡೆಯುತ್ತಿದ್ದು, ಜನಮಾನಸ ತಲುಪುವ ಜತೆಯಲ್ಲಿ ಶರಣರ ಚಿಂತನೆ, ಸಾಧಕರು, ಸಾಧುಸಂತರ ವಿಚಾರಗಳು ಅನಾವರಣಗೊಳ್ಳುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್, ಬಸವಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತ. ಬಸವಣ್ಣ ಅವರ ವಚನಗಳು ಸಮಾಜದ ವಿವಿಧ ಸಂಗತಿಗಳ ಬಗ್ಗೆ ಪ್ರಸ್ತಾಪಿಸಿದ್ದವು. ಪ್ರತಿ ವಚನಗಳಲ್ಲಿಯೂ ಬದುಕಿಗೆ ಅವಶ್ಯವಿರುವ ಸಂಗತಿಗಳನ್ನು ತಿಳಿಸುತ್ತದೆ ಎಂದು ಹೇಳಿದರು.

Akhila Bharatha Sharana Sahitya Parishad ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಯುವಪೀಳಿಗೆಯಲ್ಲಿ ಧರ್ಮ, ಸಂಸ್ಕೃತಿಯ ಅರಿವು ಮೂಡಿಸುವ ಜತೆಯಲ್ಲಿ ಧಾರ್ಮಿಕ ಮನೋಭಾವನೆ ಬೆಳೆಸಬೇಕು. ಮಕ್ಕಳಲ್ಲಿ ಸಕರಾತ್ಮಕ ಭಾವನೆ ಬೆಳೆಸಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಚಿಂತನ ಕಾರ್ತಿಕದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಜೀವನಕ್ಕೆ ಅಮೂಲ್ಯವಾಗಿ ಬೇಕಿರುವ ಸಂಸ್ಕಾರವನ್ನು ಚಿಂತನ ಕಾರ್ತಿಕದಂತಹ ಕಾರ್ಯಕ್ರಮಗಳು ಕಲಿಸುತ್ತವೆ. ನಾವು ಮಾಡಿದ ಸಮಾಜಮುಖಿ ಸೇವೆ ದಾನ, ಧರ್ಮ ನಮ್ಮನ್ನು ಕಾಪಾಡುತ್ತದೆ. ಪರಿಸರ ಉಳಿಸಿ ಬೆಳೆಸುವ ಜತೆಯಲ್ಲಿ ಆರೋಗ್ಯ ಜೀವನ ನಡೆಸಬೇಕು ಎಂದು ತಿಳಿಸಿದರು.

ಚನ್ನಗಿರಿ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಡಿ.ಎಂ.ಶಂಕರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ, ಕಮಲಮ್ಮ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...