Friday, December 5, 2025
Friday, December 5, 2025

Karnataka Rajyotsava ನಮ್ಮ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ- ಡಾ.ಎಚ್.ಬಿ.ಮಂಜುನಾಥ್

Date:

Karnataka Rajyotsava “ನಮ್ಮ ದೇಶೀಯ ಸಂಸ್ಕೃತಿಯು ವಿಶ್ವದಲ್ಲೇ ಶ್ರೇಷ್ಠವಾಗಿದೆ” ಬಿ ಜೆ ಎಂ ಶಾಲಾ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ- ದಾವಣಗೆರೆ.ನ.23. ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳು ಪ್ರಪಂಚದಲ್ಲೇ ಶ್ರೇಷ್ಠವಾಗಿದ್ದು ನಮ್ಮ ರಾಜ್ಯದ ಸಂಸ್ಕೃತಿಯಂತೂ ಪರಮ ಶ್ರೇಷ್ಠವಾಗಿದೆ, ಇದನ್ನು ಶಾಲಾ ಶಿಕ್ಷಣದಲ್ಲಿ ಪೂರ್ತಿಯಾಗಿ ಕೊಡಲು ಸಾಧ್ಯವಿಲ್ಲ, ಮನೆಯಲ್ಲಿ ಪೋಷಕರೇ ಮಕ್ಕಳಿಗೆ ಕೊಡಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಕರೆ ಕೊಟ್ಟರು. ಅವರಿಂದು ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಬಿ ಜೆ ಎಂ ಶಾಲೆಯಲ್ಲಿ ಏರ್ಪಾಡಾಗಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಭುವನೇಶ್ವರೀ ಹಾಗೂ ನೆಹರೂ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ ಕನ್ನಡದ ನೆಲದಲ್ಲಿ ವಾಸವಾಗಿದ್ದು ಕನ್ನಡದ ಅನ್ನಾಹಾರಗಳನ್ನು ಸೇವಿಸುವ ಎಲ್ಲರೂ ಕರ್ನಾಟಕದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲೇಬೇಕು, ಕನ್ನಡ ಭಾಷೆಯನ್ನು ಬಳಸಲೇಬೇಕು, ಅನ್ಯ ಭಾಷೆಗಳನ್ನು ದ್ವೇಷಿಸಬಾರದು ಆದರೆ ಕನ್ನಡವನ್ನು ಅಲಕ್ಷಿಸಬಾರದು ಎಂದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತರು ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷರು ಆದ ನಾಗರಾಜ ಎಸ್ ಬಡಿದಾಳ್ ರವರು ಮನೆಯಲ್ಲಿ ತಾಯಂದಿರು ತಮ್ಮ ಬಿಡುವಿನ ವೇಳೆಯಲ್ಲಿ ಟಿವಿ ಧಾರಾವಾಹಿ ಮುಂತಾದವುಗಳನ್ನು ಮಿತವಾಗಿ ನೋಡುತ್ತಾ ಉಳಿದ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು, ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಕುರಿತಾಗಿ ಹೇಳುತ್ತಿರಬೇಕು ಎಂದು ಕರೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಸಾಧಕರ ಸಂದರ್ಶಕಿ ಅಶ್ವಿನಿ ಗೌಡ ರವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಬದಲಾವಣೆಗಳು ಶಾಲೆಯಲ್ಲಿ Karnataka Rajyotsava ಶಿಕ್ಷಕರಿಂದಲೂ ಮನೆಯಲ್ಲಿ ಪೋಷಕರಿಂದಲೂ ಆಗಬೇಕೆಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಶಾಲಾ ಕಾರ್ಯದರ್ಶಿ ಕೆ ಎಸ್ ಮಂಜುನಾಥ ಅಗಡಿ ಮಾತೃಭಾಷೆಯಾದ ಕನ್ನಡದೊಂದಿಗೆ ರಾಷ್ಟ್ರೀಯ ಭಾಷೆಯಾದ ಹಿಂದಿ ಹಾಗೂ ಅಂತಾರಾಷ್ಟ್ರೀಯ ಭಾಷೆಯಾದ ಆಂಗ್ಲವನ್ನು ಕಲಿತರೆ ಒಳ್ಳೆಯದೆಂದರು. ಹನುಮಂತಪ್ಪ ಉಪಸ್ಥಿತರಿದ್ದು ಅಧ್ಯಾಪಕಿ ಗೀತಾಂಜಲಿ ಸ್ವಾಗತ ಕೋರಿದರು. ಅರ್ಪಿತಾ ಶ್ರೀ ವಿದ್ಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಆಶಾ ಪ್ರಸ್ತಾವಿಕ ನುಡಿಗಳನ್ನಾಡಿದರು. ದಿನಾಚರಣೆಯ ಕುರಿತು ವಿದ್ಯಾರ್ಥಿಗಳಾದ ರಂಜಿತಾ ತೇಜಸ್ ರಿಷಿಕಾ ಅಮೀರ ವೈಷ್ಣವಿ ರಾಜೇಶ್ವರಿ ಮುಂತಾದವರು ಮಾತನಾಡಿದರು. ಅರ್ಪಿತ ವಂದನೆ ಸಲ್ಲಿಸಿದರು. ಶಾಲಾ ಮಕ್ಕಳಿಂದ ವೈವಿಧ್ಯಮಯ ನೃತ್ಯ ಹಾಗೂ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...