Wednesday, November 20, 2024
Wednesday, November 20, 2024

Indira Gandhi ನಮ್ಮ ಪಂಚ ಗ್ಯಾರಂಟಿಗಳು ಶ್ರೀಮತಿ ಇಂದಿರಾ ಗಾಂಧಿಯವರಿಂದ ಪ್ರೇರಣೆ ಪಡೆದಿವೆ- ಸಿಎಂ ಸಿದ್ಧರಾಮಯ್ಯ

Date:

Indira Gandhi ಸರ್ವರಿಗೂ ಸಮಪಾಲು ನೀಡುವ ಸ್ವಾವಲಂಬಿ ಮತ್ತು ಜಾತ್ಯತೀತ ಭಾರತದ ರೂವಾರಿ ಶ್ರೀಮತಿ ಇಂದಿರಾಗಾಂಧಿಯವರನ್ನು ಅವರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯುತ್ತೇನೆ. ಅವರ ಬಡವರ ಪರವಾದ ಕಾಳಜಿ ಮತ್ತು ಅಭಿವೃದ್ಧಿಯ ಮುನ್ನೋಟದಿಂದ ನಾನು ಪ್ರೇರಿತನಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಕೂಡಾ ಶ್ರೀಮತಿ ಇಂದಿರಾಗಾಂಧಿಯವರಿಂದ ಪ್ರೇರಣೆ ಪಡೆದಿವೆ. ಬಡವರ ಬಗ್ಗೆ ಅವರ ಹೃದಯ ಸದಾ ಮಿಡಿಯುತ್ತಿತ್ತು. ಗರೀಬಿ ಹಟಾವೋ ಎಂದು ಹೇಳುತ್ತಾ ಬಡತನದ ವಿರುದ್ಧ ಅವರು ಸಮರವನ್ನೇ ಸಾರಿದ್ದರು.

Indira Gandhi ಪ್ರಧಾನ ಮಂತ್ರಿಯಾಗಿ ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಸ್ಥಾಪನೆಯೂ ಸೇರಿದಂತೆ ಅವರು ದಿಟ್ಟತನದಿಂದ ಕಾರ್ಯರೂಪಕ್ಕೆ ತಂದಿದ್ದ ಜನಪರ ನೀತಿ-ನಿರ್ಧಾರಗಳು ನಮ್ಮ ಕಣ್ಣಮುಂದೆಯೇ ಬುಡಮೇಲು ಆಗುತ್ತಿದೆ. ಈ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಶ್ರೀಮತಿ ಇಂದಿರಾಗಾಂಧಿಯವರ ಬದುಕು ಮತ್ತು ಚಿಂತನೆ ನಮಗೆಲ್ಲ ಪ್ರೇರಣೆಯಾಗಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rising Goju Karate School ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಿವಮೊಗ್ಗದ ತೇಜಸ್ ಕಟಾ ಗೆ ದ್ವಿತೀಯ ಸ್ಥಾನ

Rising Goju Karate School ನವಂಬರ್ 16ರಂದು ತಮಿಳುನಾಡಿನ ಊಟಿಯಲ್ಲಿನ ಅನ್ನ...

DC Shivamogga ಸಫಾಯಿ ಕರ್ಮಚಾರಿಗಳಿಗೆ ಕಾನೂನು ಬದ್ಧ ಸೌಲಭ್ಯಗಳನ್ನ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ- ಗುರುದತ್ತ ಹೆಗಡೆ

DC Shivamogga ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಫಾಯಿ...

Karnataka Amateur Boxing Association ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಮೀನಾಕ್ಷಿಗೆ ದ್ವಿತೀಯ ಸ್ಥಾನ

Karnataka Amateur Boxing Association ನವೆಂಬರ್ 18ರಂದು ಬೆಂಗಳೂರಿನ ವಿದ್ಯಾರಣ್ಯಪುರದ ಮಹಾನಗರ...