Monday, August 3, 2026
Monday, August 3, 2026

ಜಿಲ್ಲೆಯಲ್ಲಿನ ಕೆಲವು ಪಂಚಾಯತ್ ಗಳಿಗೆ ಉಪ ಚುನಾವಣೆ‌ ಪ್ರಯುಕ್ತ ಆಯಾ ಸ್ಥಳಗಳ ಶಾಲೆಗಳಿಗೆ ರಜೆ ಘೋಷಣೆ

Date:

ನ.23 ರಂದು ಶಿವಮೊಗ್ಗ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದ್ದು, ಚುನಾವಣಾ ಕ್ಷೇತ್ರಗಳಲ್ಲಿನ ಮತದಾನ ಕೇಂದ್ರಗಳು ಬಹುತೇಕ ಶಾಲೆಗಳಾಗಿವೆ. ಮತದಾನದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವುದರಿಂದ ಜನದಟ್ಟಣೆಯಾಗಿ ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮತದಾನ ಕೇಂದ್ರವಿರುವ ಶಾಲೆಗಳಿಗೆ ನ. 23 ರ ಶನಿವಾರದಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪದ ಸ.ಕಿ.ಪ್ರಾ.ಶಾಲೆ ಮತ್ತು ಹೊಳಲೂರು ಅಂಗನವಾಡಿ ಕೇಂದ್ರ ಜನತಾ ಕಾಲೋನಿ. ಭದ್ರಾವತಿ ತಾಲೂಕಿನ ಬಾರಂದೂರು ಸ. ಹಿ.ಪ್ರಾ.ಶಾಲೆ (ಉತ್ತರಭಾಗ). ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿ ಸ.ಹಿ.ಪ್ರಾ.ಶಾಲೆ. ಶಿಕಾರಿಪುರ ತಾಲೂಕಿನ ತರಲಘಟ್ಟ ಸ.ಹಿ.ಪ್ರಾ.ಶಾಲೆ, ಶಿಕಾರಿಪುರದ ಸ.ಉರ್ದು ಹಿ.ಪ್ರಾ.ಶಾಲೆ ಖಾಜಿ ಮೊಹಲ್ಲ ಹಾಗೂ ಶಿರಾಳಕೊಪ್ಪದ ಸ.ಉರ್ದು ಹಿ.ಪ್ರಾ.ಶಾಲೆ ಆಜಾದ್ ವೃತ್ತ. ಸಾಗರ ತಾಲೂಕಿನ ಕುದರೂರು ಸ.ಹಿ.ಪ್ರಾ.ಶಾಲೆ ಕೊ.ಸಂ.1 ಈ ಶಾಲೆಗಳಲ್ಲಿ ನ.23 ರಂದು ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...