Sunday, August 2, 2026
Sunday, August 2, 2026

D. S. Arun ಗೋಮಾತೆಯನ್ನ ಫೂಜಿಸುವ ಮೂಲಕ ಶಾಸಕ ಅರುಣ್ ಜನ್ಮದಿನ ಆಚರಣೆ

Date:

D. S. Arun ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ 52ನೇ ಜನ್ಮದಿನವನ್ನು ವಿವಿಧ ಸಮಾಜಮುಖಿ ಸೇವಾ ಕಾರ್ಯಗಳ ಮುಖಾಂತರ ಜನ್ಮದಿನ ಆಚರಿಸಿಕೊಂಡರು.
ಎಂಎಲ್‌ಸಿ ಡಿ.ಎಸ್.ಅರುಣ್ ಜನ್ಮದಿನದ ಪ್ರಯುಕ್ತ ಸ್ನೇಹಿತರ ಜತೆಗೂಡಿ ರಕ್ತದಾನ ಮಾಡಿದರು. ಈವರೆಗೂ ಅರುಣ್ ಅವರು 42 ಬಾರಿ ರಕ್ತದಾನ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಮಾತನಾಡಿ, ಜನ್ಮದಿನ ಅರ್ಥಪೂರ್ಣ ಆಗಬೇಕಾದರೆ ಮನುಕುಲದ ಸೇವೆ ಜತೆಯಲ್ಲಿ ಸಮಾಜಮುಖಿ ಆಲೋಚನೆ ಹೊಂದಿರಬೇಕು. ಜನ್ಮದಿನ ಸೇರಿದಂತೆ ವಿಶೇಷ ದಿನಗಳಲ್ಲಿ ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂದಾಗಬೇಕು. ಇದರಿಂದ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.
D. S. Arun ಬುಧವಾರ ಬೆಳಗ್ಗೆ ಹುಣಸೋಡು ಗೋಶಾಲೆಯಲ್ಲಿ ಗೋಮಾತೆ ಪೂಜೆ ನೆರವೇರಿಸಿದರು. ಹುಲ್ಲು ಹಿಂಡಿ ಹಾಗೂ ಧನಸಹಾಯ ನೀಡಿ ಕುಟುಂಬದ ಸದಸ್ಯರು ಹಾಗೂ ಎಲ್ಲ ಸ್ನೇಹಿತರೊಂದಿಗೆ ಗೋಪೂಜೆ ಮಾಡಿದರು.
ಬೆಳಗ್ಗೆ ರವೀಂದ್ರ ನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅನೇಕ ಸ್ನೇಹಿತರು, ಸಂಘ ಸಂಸ್ಥೆಯ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
ರೋಟರಿ ರಕ್ತ ನಿಧಿ ಟ್ರಸ್ಟ್ ಮಾಜಿ ಚೇರ್ಮನ್ ಜಗನ್ನಾಥ್, ಮನೋಜ್, ಅಮರ್ ಶೆಟ್ಟಿ, ಸುರೇಶ್ ಸಿಂಗ್, ಕಿರಣ್, ನಾಗರಾಜ್, ರಾಘವೇಂದ್ರ ಪೈ, ನಾಗರಾಜ್ ಶೆಟ್ಟರ್, ಮುರುಗನ್, ಸಂತೋಷ್ ಕುಮಾರ್, ರಾಜೇಶ್ ಗೌಡ, ಪ್ರತಿಭಾ ಅರುಣ್, ಸುಕನ್, ಸುಪ್ರೀತಾ ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...