Saturday, December 6, 2025
Saturday, December 6, 2025

Department of Kannada and Culture ಕನಕದಾಸರು ನಾವೆಲ್ಲ ಸಮಾನರು ಎಂಬ ತತ್ವ ಸಾರಿದವರು- ಶಾಸಕಿ ಬಲ್ಕೀಷ್ ಬಾನು

Date:

Department of Kannada and Culture ಧರ್ಮ ಎಂದರೆ ಆತ್ಮದ ಶುದ್ದೀಕರಣ. ಹೃದಯ ಶುದ್ದವಾಗಿದ್ದರೆ ಮಾತ್ರ ಧನಾತ್ಮಕ ಚಿಂತನೆ ಸಾಧ್ಯ. ಎಲ್ಲ‌ ಮನುಜರೂ ಸಮಾನರು ಎಂದು ಸಾರಿದವರು ಕನಕದಾಸರು.

ನಾವೆಲ್ಲ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕಿ‌ ಬಲ್ಕೀಶ್ ಬಾನು‌ ಹಳಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ‌ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದಲ್ಲಿ ಯೋಧನಾಗಿ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದ ಕನಕದಾಸರು ಜನರ ಸಂಕಷ್ಟಗಳನ್ನು‌ ನೋಡಿ, ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿದು‌ ತಮ್ಮ ಗೀತೆಗಳು, ಕೀರ್ತನೆಗಳ ಮೂಲಕ ಪರಿಹಾರ ತೋರಿದವರು.

ಬಸವ ತತ್ವ ಗಳನ್ನು ಅಳವಡಿಕೊಂಡ ಅವರು ನುಡಿದಂತೆ ನಡೆದು, ಶೋಷಿತರ ಧ್ವನಿಯಾಗಿದ್ದರು. ನಾವೆಲ್ಲ ಸಮಾನರು ಎಂಬ ತತ್ವದೊಂದಿಗೆ ಬಡವರ ಸಂಕಷ್ಟಕ್ಕೆ ಮಿಡಿದವರು. ಅವರ ಜಯಂತಿ
ಕೇವಲ ಸರ್ಕಾರದ ಜಯಂತಿ ಆಗಬಾರದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ‌‌ ಸಾಗಬೇಕು ಎಂದರು.

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್‌ ಮಾತನಾಡಿ, ಸಮಾಜ ಸುಧಾರಣೆಯಲ್ಲಿ‌ ಕನಕದಾಸರ ಕೊಡುಗೆ ಅಪಾರ. ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ, ಬದಲಾಗಿ‌ಎಲ್ಲ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಜಯಂತಿಯಲ್ಲಿ‌ ಎಲ್ಲರೂ ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಜಯಂತಿ ಆಚರಣೆ ಮಾಡಬೇಕು. ಈಗಿನ ಮಕ್ಕಳಿಗೆ ಕನಕದಾಸರನ್ನು ಪರಿಚಯಿಸಬೇಕು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್‌ಮಾತನಾಡಿ, ೧೫ ನೇ ಶತಮಾನದಲ್ಲಿ ೧೭ ಗ್ರಾಮಗಳಿಗೆ ಪಾದಯಾತ್ರೆ ಮೂಲಕ ಜನರ ಮನೆ ಮನೆಗೆ ಹೋಗಿ ಸಮಸ್ಯೆ ತಿಳಿದು ಪರಿಹರಿಸುವ ಕೆಲಸ ಮಾಡಿದ ಕನಕರ‌ ಆದರ್ಶ , ಚಿಂತನೆ ಇಂದಿಗೂ ಪ್ರಸ್ತುತ. ಭಕ್ತಿಗೆ ಭಗವಂತ ಒಲಿಯುತ್ತಾನೆಂಬುದಕ್ಕೆ ಶ್ರೀ ಕೃಷ್ಣನನ್ನು ಒಲಿಸಿಕೊಂಡ ಕನಕದಾಸರೇ ಸಾಕ್ಷಿ ಎಂದರು.

ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ(ಪ್ರಭಾರ) ಡಾ.ಚಿದಾನಂದ ಎನ್.ಕೆ.ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹಾನ್ ಮಾನವತಾವಾದಿ, ದಾರ್ಶನಿಕರಾದ ಕನಕದಾಸರು ಪಂಚಮವೇದದಲ್ಲಿ
ಪ್ರಮಯಖ ನಾಯಕರಾಗಿ ನೆಲೆಗೊಂಡಿದ್ದಾರೆ.

Department of Kannada and Culture ರಾಜಕಾರಣ, ದಾರ್ಶನಿಕತೆ ಮತ್ತು ಅಕ್ಷರಗಳನ್ನು ಶ್ರೇಷ್ಠ ವಾಗಿ ಅಪ್ಪಿಕೊಂಡು ಸಾಗಿದವರು ಕನಕರು. ಬಾಡಾ ನಗರ ವ್ಯಾಪಾರಿ ತಾಣವಾಗಿದ್ದು, ತಂದೆ ಬೀರಪ್ಪ ನಾಯಕ‌ರು ಅಲ್ಲಿನ ಮುಖ್ಯಸ್ಥರಾಗಿದ್ದರು. ತಂದೆಯಿಂದ ಸಕಲ ವಿದ್ಯೆಗಳನ್ನು ಕನಕರು ಪಡೆದಿದ್ದರು. ಏಕತಾರಿ, ಕಂಬಳಿ ಮತ್ತು ಕೀರ್ತನೆ ಮೂಲಕ ದಾರ್ಶನಿಕರಾಗಿ ಊರಿನಿಂದ ಊರಿಗೆ ಗೀತೆ-ಕೀರ್ತನೆಗಳ ಮೂಲಕ ಸಮಾನತೆಯ ತತ್ವಗಳನ್ನು ಸಾರುತ್ತಾ ಹೋದರು. ನಡೆದಂತೆ ನುಡಿದವರು. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕನಕರು ಪ್ರತಿಪಾದಿಸಿದಂತೆ ನೆಲ ಸಂಸ್ಕೃತಿ, ಕಲೆ ಮತ್ತು ಜ್ಞಾನದ ಆಧಾರದಲ್ಲಿ ನೆಲೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಶ್ರವಣ ಸಂಸ್ಕೃತಿಯ ದೊಡ್ಡ ದ್ಯೋತಕ ಕನಕ. ಇಂದಿನ ಮಕ್ಕಳು ದಾರ್ಶನಿಕರು ಹೇಳಿದ ಮಾತುಗಳನನ್ನು ಕೇಳಬೇಕಿದೆ ಎಂದು ಹೇಳಿದರು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಕನಕರ ಭಕ್ತಿಗೆ ಭಗವಾನ್ ಶ್ರೀ ಕೃಷ್ಣನೂ ದರ್ಶನ ನೀಡಿದ್ದರು.ಭಕ್ತಿ, ಶ್ರಮದಿಂದ ಬದುಕುವ ಸಮಾಜ ನಮ್ಮದು. ಯಾರೂ ಮೇಲು ಕೀಳಲ್ಲ. ನಾವೆಲ್ಲ ಒಂದೇ ಎಂದು ಕನಕರು ಶೋಷಿತ ವರ್ಗದ ಧ್ವನಿಯಾಗಿ ಸಾಹಿತ್ಯ ರಚಿಸಿದ್ದಾರೆ. ಅವರು‌ ಕುರುಬ ಸಮಾಜಕ್ಕೆ ಮಾತ್ರ ಸೀಮಿತರಲ್ಲ. ಎಲ್ಲ ವರ್ಗಕ್ಕೆ ಸೇರಿದವರು.‌ ಸಹಬಾಳ್ವೆ , ಪ್ರೀತಿಯಿಂದ ಒಟ್ಟಾಗಿ ಹೋಗೋಣ ಎಂದರು.‌

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ , ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ‌ ಉಮೇಶ್ ಹೆಚ್‌ ಸ್ವಾಗತಿಸಿದರು. ರೇಖಾ ರಂಗನಾಥ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...