Bahumukhi Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ ನಲವತ್ತೆರಡನೇ ಕಾರ್ಯಕ್ರಮವಾಗಿ ನಿರ್ಮಲ ತುಂಗ ಭದ್ರ ಅಭಿಯಾನ ಕುರಿತಾದ ಮಾಹಿತಿ- ಸಂವಾದ-ಚರ್ಚೆ ಅಯೋಜನೆಗೊಂಡಿದೆ. ನ. ,16ರಂದು ಸಂಜೆ 5:30ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ರಂಡ್ಸ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಅಭಿಯಾನದ ಅಧ್ಯಕ್ಷರಾದ ಬಸವರಾಜ ಪಾಟೀಲ್‌ರವರು ಮಾಹಿತಿ ನೀಡಲಿದ್ದು, ಪರಿಸರ ತಜ್ಞ ಡಾ. ಎಲ್.ಕೆ. ಶ್ರೀಪತಿಯವರು ಸಂವಾದ ನಡೆಸಿಕೊಡಲಿದ್ದಾರೆ.
ತುಂಗಾ ಭದ್ರಾ ನದಿಗಳು ಕಲುಷಿತಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಜನಜಾಗೃತಿ ಮೂಡಿಸಲು ಮಾಜಿ ಕೇಂದ್ರ ಸಚಿವ ಗೋವಿಂದನ್ ನಾಯಕತ್ವದ ರಾಷ್ಟ್ರೀಯ ಸ್ವಾಭಿಮಾನ್ ಅಂದೋಲನ, ಈಗಾಗಲೇ ಶೃಂಗೇರಿಯಿಂದ ಪಾದಯಾತ್ರೆ ಮೂಲಕ ಒಂದು ದೊಡ್ಡ ಆಂದೋಲನ ಆರಂಭ ಮಾಡಿದೆ. ಇದರ ಮೊದಲ ಹಂತ ನ.14ರಂದು ಹರಿಹರದಲ್ಲಿ ಮುಗಿಯಲಿದ್ದು, ಎರಡನೇ ಹಂತ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆವರೆಗೆ ಮುಂದುವರೆಯಲಿದೆ.
Bahumukhi Shivamogga ಒಟ್ಟಾರೆ ಸುಮಾರು 430 ಕಿಮೀ ಪಾದಯಾತ್ರೆ ಕ್ರಮಿಸಲಿದೆ.
ಪವಿತ್ರ ತುಂಗಾ ತಟದಲ್ಲಿ ವಾಸಿಸುತ್ತಿರುವ ಎಲ್ಲರೂ ಈ ಆಂದೋಲನದಲ್ಲಿ ಕೈ ಜೋಡಿಸಬೇಕಿದೆ. ಈ ಆಂದೋಲನದ ರೂಪು ರೇಷೆ, ಮಾಹಿತಿ ಪಡೆದು ಚರ್ಚೆಯಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.