Sir.M. Vishveshvaraya ಕೋಲಾರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನ. 08 ರಿಂದ 10 ರವರೆಗೆ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯ ಅಥ್ಲೇಟಿಕ್ ವಿಭಾಗದಲ್ಲಿ ಜಿಲ್ಲೆಯ 8 ವಿದ್ಯಾರ್ಥಿಗಳು ಪದಕ ಗಳಿಸಿದ್ದಾರೆ.
ಅಮೂಲ್ಯ ಉದ್ದ ಜಿಗಿತದಲ್ಲಿ ಪ್ರಥಮ, ಅನ್ವಿತ ಎಂ.ಆರ್. ಎತ್ತರ ಜಿಗಿತದಲ್ಲಿ ಪ್ರಥಮ, ಲಕ್ಷ್ಮಿ ಹೆಚ್.ಪಿ. 400 ಮೀ ಹರ್ಡಲ್ಸ್ನಲ್ಲಿ ದ್ವಿತೀಯ, ಸಿರಿ ಕೆ.ಜೆ. 100 ಮೀ ಹರ್ಡಲ್ಸ್ನಲ್ಲಿ ತೃತೀಯ, ಮಣಿಕಂಠ ಗೌಡ ಎತ್ತರ ಜಿಗಿತದಲ್ಲಿ ಪ್ರಥಮ, ಸಂಜಯ ಹಂಚಿನಮನೆ 200 ಮೀ ಓಟದಲ್ಲಿ ತೃತೀಯ, ಸಚಿನ್ ಜಾಧವ್ 4100 ಮೀ ರಿಲೇಯಲ್ಲಿ ತೃತೀಯ ಹಾಗೂ ಶರತ್ ಕೆ.ಜೆ. 4100 ಮೀ ರಿಲೇಯಲ್ಲಿ ತೃತೀಯ ಸ್ಥಾನಗಳಿಸಿ ಪದಕ ವಿಜೇತರಾಗಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ತಿಳಿಸಿದ್ದಾರೆ.
Sir.M. Vishveshvaraya ಈ ಕ್ರೀಡಾಪಟುಗಳು ಶಿವಮೊಗ್ಗದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದಲ್ಲಿ ಅಥ್ಲೆಟಿಕ್ ತರಬೇತುದಾರ ಬಾಳಪ್ಪ ಮಾನೆಯವರಿಂದ ದೈನಂದಿನ ತರಬೇತಿ ಪಡೆಯುತ್ತಿದ್ದಾರೆ.
ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.