Amrita Hasta Charitable Trust ಸರ್ಕಾರಿ ಶಾಲೆಗಳ ಉಳಿಸುವಿಕೆಗೆ ಅಮೃತ ಹಸ್ತ ಚಾರಿಟೇಬಲ್ ಟ್ರಸ್ಟ್ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದು ಅಮೃತ್ ನೋನಿ ಮುಖ್ಯಸ್ಥ ಡಾ. ಶ್ರೀನಿವಾಸಮೂರ್ತಿ ಹೇಳಿದರು.
ಶಿವಮೊಗ್ಗ ತಾಲೂಕಿನ ಬಸವಪುರದ ಸರ್ಕಾರಿ ಶಾಲೆಗೆ ಸ್ಮಾರ್ಟ್ ಟಿವಿ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಅಗತ್ಯ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಶಿಕ್ಷಣಕ್ಕೆ ಪೂರಕವಾದ ವಸ್ತುಗಳನ್ನು ಒದಗಿಸಿದರೆ ಉತ್ತಮ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು. ಸರ್ಕಾರಿ ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು. ವಿದ್ಯಾರ್ಥಿಗಳ ಕಲಿಕಾ ವಿಧಾನ ವೃದ್ಧಿಸಲು ಆಧುನಿಕ ಉಪಕರಣಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
Amrita Hasta Charitable Trust ಅಮೃತ್ ನೋನಿ ಮುಖ್ಯಸ್ಥ ಡಾ. ಶ್ರೀನಿವಾಸಮೂರ್ತಿ, ಶಿವಮೊಗ್ಗ ನಗರದ ಪಂಚಮಿ ಆಯುರ್ವೇದ ಕೇಂದ್ರದ ಡಾ. ಕಾಂಚನಾ ಕುಲಕರ್ಣಿ, ಅಮೃತಹಸ್ತ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಆನಂದ್ ಯಾದವ್ ಅವರ ಮೂಲಕ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ವಿತರಿಸಲಾಯಿತು.
ರಾಮೇನಕೊಪ್ಪ ಪ್ರಗತಿಪರ ಕೃಷಿಕ ರಾಮಮೂರ್ತಿ, ಪ್ರಮುಖರಾದ ರಾಜು ಶಿವಮೊಗ್ಗ, ಮಂಜುಳಾ, ಮಾಧವಿ, ರಾಮಚಂದ್ರ, ಅನುಷಾ, ವಿಜಯಲಕ್ಷ್ಮೀ, ಶ್ವೇತಾ, ಶೋಭಾ, ಗಂಗಾಧರ್, ವಿಜಯ, ಹಾಲೇಶ್, ರುದ್ರೇಶ್, ಬಸವಾಪುರ ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು.