Thursday, November 14, 2024
Thursday, November 14, 2024

B.Y.Raghavendra ತುಂಗ- ಭದ್ರಾ ನದಿಗಳು ನಮ್ಮ ಮಲೆನಾಡಿನ ಜೀವನದಿಗಳು- ಸಂಸದ ರಾಘವೇಂದ್ರ

Date:

B.Y.Raghavendra ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ “ಶೃಂಗೇರಿಯಿಂದ-ಕಿಷ್ಕಿಂದೆವರೆಗೆ” ನಡೆಯುತ್ತಿರುವ “ನಿರ್ಮಲ ತುಂಗಾ-ಭದ್ರಾ ಅಭಿಯಾನ – ಬೃಹತ್ ಜಲ ಜಾಗೃತಿ, ಬೃಹತ್ ಜನ ಜಾಗೃತಿ” ಅಭಿಯಾನದ ಪಾದಯಾತ್ರೆ ನಗರಕ್ಕೆ ಆಗಮಿಸಿದ್ದು ಇದರ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಮಲೆನಾಡ ಜೀವನದಿಯನ್ನು ಉಳಿಸುವ ಪ್ರಯುಕ್ತ ಅದರ ಸಾಧ್ಯ ಸಾಧ್ಯತೆಗಳನ್ನು ವಿಮರ್ಶಿಸಲು ಇಂದು ಆಯೋಜಿಸಿದ್ದ “ಪ್ರಬುದ್ಧರ ಸಭೆ” ಯಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಳ್ಳಲಾಯಿತು.

ತುಂಗಾ-ಭದ್ರಾ ನದಿಯು ನಮ್ಮ ಮಲೆನಾಡಿನ ಜೀವನದಿಯಾಗಿದೆ. ದೈವದತ್ತವಾಗಿ ನಮಗೆ ದೊರಕಿರುವ ಎರಡು ಪ್ರಮುಖ ನದಿಗಳಾಗಿದೆ. ಆಧುನೀಕರಣ ಮತ್ತು ಕೈಗಾರಿಕರಣದಿಂದ ನದಿಯ ಪಾವಿತ್ರತೆ ಹದಗೆಡುತ್ತಿದೆ. ಮನುಷ್ಯನ ತಪ್ಪಿನಿಂದಾಗಿ ನದಿಯು ಮಲಿನಗೊಳ್ಳುತ್ತಿದೆ. ಪವಿತ್ರ ಜಲವನ್ನು ಸಂರಕ್ಷಿಸಿ ಮಲಿನ ಮುಕ್ತ ನದಿಯನ್ನಾಗಿ ಮಾಡುವುದು ಈ ಮೂಲಕ ಭವಿಷ್ಯದ ಉತ್ತಮ ದಿನಗಳನ್ನು ರಕ್ಷಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ.

B.Y.Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಗಣ್ಯರಾದ ಪ್ರೊ. ಕುಮಾರಸ್ವಾಮಿ ಅವರು, ಶ್ರೀ ಗೋಪಿನಾಥ ಅವರು, ಶ್ರೀ ಗಿರೀಶ್ ಪಟೇಲ್ ಅವರು, ಡಾ. ಶ್ರೀಧರ್ ಅವರು ಸೇರಿದಂತೆ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Supreme Court ದೆಹಲಿಯಲ್ಲಿ ವಾಯುಮಾಲಿನ್ಯ. ತುರ್ತು ನಿಯಂತ್ರಣ ಕ್ರಮಕೈಗೋಳ್ಳಲು “ಸುಪ್ರೀಂ” ಸೂಚನೆ

Supreme Court ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರಿರುವ ವಾಯುಮಾಲಿನ್ಯದ ಬಗ್ಗೆ ಸುಪ್ರೀಂ...

Bangalore University ಸಾಗರದ ವ್ಯಕ್ತಿ. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಎಂ.ಎಸ್ .ತಿಮ್ಮಪ್ಪ ನಿಧನ

Bangalore University ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳೂ, ಮನೋವಿಜ್ಞಾನ ಪ್ರಾಧ್ಯಾಪಕರೂ ಆಗಿ ಖ್ಯಾತರಾಗಿದ್ದ...

Ministry of Youth Affairs and Sports ನವೆಂಬರ್ 16. ಶಿವಮೊಗ್ಗ ಜಿಲ್ಲಾಯುವಜನೋತ್ಸವ-2024

Ministry of Youth Affairs and Sports, ಭಾರತ ಸರ್ಕಾರ, ಯುವ...