Donald Trump ಅಮೆರಿಕಕ್ಕೆ ವಿಶ್ವದ ದೊಡ್ಡಣ್ಣ ಎಂಬ ಅಡ್ಡ ಹೆಸರಿದೆ. ಅಲ್ಲಿ ಏನಾದರೂ ರಾಜಕೀಯ ಸ್ಥಿತ್ಯಂತರವಾದರೆ ಜಗತ್ತಿನ ಮೂಲೆ ಮೂಲೆ ದೇಶಗಳಲ್ಲಿ ಎದೆ ಢವಗುಟ್ಟುತ್ತದೆ.
ಇದು ಸಾಮಾನ್ಯ ಸಂಗತಿ. ಅಮೆರಿಕದ ಅಧ್ಯಕ್ಷ ಚುನಾವಣೆ ನಡೆದಾಗಲೆಲ್ಲ ಸಣ್ಣಪುಟ್ಟ ದೇಶಗಳುಜೀವ ಹಿಡಿದುಕೊಂಡು ನಿಂತಿರುತ್ತವೆ. ಜಾಗತಿಕ ಯುದ್ಧ ಆರ್ಥಿಕ ನೆರವು ,ವ್ಯಾಪಾರ ವಹಿವಾಟಿನ ಒಪ್ಪಂದ ಇವುಗಳ ವಿಚಾರದಲ್ಲಿ ಅಮೆರಿಕ ಹೇಗೆ ವರ್ತಿಸುತ್ತದೆ ಎಂಬುದು ಚುನಾಯಿತ ಅಧ್ಯಕ್ಷರ ಮೇಲೆ ಅವಲಂಬಿತ.
ಈಗ ಟ್ರಂಪ್ ಪುನರಾಗಮನವಾಗಿದೆ. ಭಾರತದ ಮೇಲೆ ಏನು ಪರಿಣಾಮ ಬೀರಬಹುದು?
ಮೊದಲ ಪರಿಣಾಮವೆಂದರೆ
ಡಾಲ್ ಎದುರು ರೂಪಾಯಿ ಕುಸಿತ.
ಇದು ಚೀನಾ ಮತ್ತು ಇರಾನ್ ಗೂ ಬೀರಿದೆ.
Donald Trump “ಅಮೆರಿಕ ಮೊದಲು” ಎಂಬ ಟ್ರಂಪ್ ಘೋಷಣೆಯಂತೆ
ಭಾರತದ ಆಟೊಮೊಬೈಲ್ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ. ರಫ್ತಿನ ಮೇಲೆ ಅಧಿಕ ಸುಂಕ ಹಾಕುವ ಸಾಧ್ಯತೆಯಿಂದ ಸಂಕಷ್ಟ ಬರಬಹುದು.
ಎಚ್ -1 ವೀಸಾ ನೀತಿಯೂ ಕಠಿಣವಾಗಬಹುದು.
ಭಾರತದಿಂದ ಐಟಿ ರಂಗವು ಶೇ,80 ರಫ್ತು ಮಾಡುತ್ತಿದೆ. ಇದೂ ಕೂಡ ಕೆಳಗಿಳಿಯುವ ಸಾಧ್ಯತೆ ಹೆಚ್ಚಾಗಿದೆ.