Rotary Club Shivamogga ಆತ್ಮವಿಶ್ವಾಸ, ಪರಸ್ಪರ ಓಡನಾಟ ವೃದ್ಧಿಸುವಲ್ಲಿ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣಕುಮಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಕುಟುಂಬ ಮಿಲನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬದ ಕಾರ್ಯಕ್ರಮದಿಂದ ಸಂಸ್ಥೆ ಸದಸ್ಯರಲ್ಲಿ ಪರಸ್ಪರ ಬಾಂಧವ್ಯ ಬೆಳೆಯುತ್ತದೆ. ಜೀವನ ಉತ್ತಮಗೊಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.
Rotary Club Shivamogga ಸಾಂಸ್ಕೃತಿಕ ಚಾಂಪಿಯನ್ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿ ಸ್ಪರ್ಧಾಳುಗಳಿಗೆ ಗೌರವಿಸಲಾಯಿತು. ಗಾಯನ ತರಬೇತಿದಾರ ಪ್ರಹ್ಲಾದ್ ದೀಕ್ಷಿತ್, ನೃತ್ಯ ತರಬೇತಿದಾರ ತೇಜಸ್ ಹಾಗೂ ಡ್ರಾಮಾ ನಿರ್ದೇಶಕ ಶಂಕರ್ ಹಾಗೂ ಸೈಯದ್ ಅಲಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಸೆಂಟ್ರಲ್‌ನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ದೀಪಾವಳಿ ಹಬ್ಬ ಆಚರಿಸಿದರು. ದೀಪ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಹಬ್ಬ ಆಚರಣೆಗೆ ಸದಸ್ಯರು ಸಂತೋಷ ವ್ಯಕ್ತಪಡಿಸಿದರು. ಪ್ರಹ್ಲಾದ್ ದೀಕ್ಷಿತ್ ರಾಗ ರಂಜಿನಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಮೂರು ಗಂಟೆಗೂ ಅಧಿಕ ಸಮಯ ನಡೆಯಿತು.
ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಪಿಡಿಜಿ ಜಿ.ಎನ್.ಪ್ರಕಾಶ್, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಚುಡಾಮಣಿ ಪವಾರ್, ಆನಂದ್, ಮುರಳಿ, ಅರುಣ್ ಕುಮಾರ್, ಇಂದ್ರೇಶ್, ರಮಾನಾಥ್ ಗಿರಿಮಾಜಿ, ಕುಮಾರ ಎಸ್ ಕೆ, ಕಲ್ಚರ ಚೇರ್ಮನ್ ರಾಜಶ್ರೀ ಬಸವರಾಜ್, ಅನ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್, ಶುಭಾ ಚಿದಾನಂದ್ ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.