Director Guruprasad Death ಗುರುಪ್ರಸಾದ್ ಅವರು ಕನ್ನಡ ಚಲನಚಿತ್ರಜಗತ್ತಿನಲ್ಲಿ ಅಪೂರ್ವ ನಿರ್ದೇಶಕರಾಗಿದ್ದರು
ಚಿತ್ರ ನಿರ್ದೇಶಕರಾಗಿ ಅವರ ಚೊಚ್ಚಲ ಚಿತ್ರವು 2006 ರ ‘ಮಾತಾ’ ಚಿತ್ರವು ಹಿಟ್ ಆಗಿತ್ತು. ನಿರ್ದೇಶಕರಾಗಿ ಅವರ ಎರಡನೇ ಚಿತ್ರ ಎದ್ದೇಳು ಮಂಜುನಾಥ . ಎರಡೂ ಸಿನಿಮಾಗಳು ಸಕಾರಾತ್ಮಕ ವಿಮರ್ಶೆಗಳೊಂದಿಗೆ ಸ್ವೀಕರಿಸಲ್ಪಟ್ಟವು.
ಹಾಗೂ ಗುರುಪ್ರಸಾದ್ ಅವರ ಚಿತ್ರಗಳು ಅನೇಕ ಪ್ರಶಸ್ತಿ ವಿಭಾಗಗಳಿಗೆ ಪರಿಗಣಿಸಲ್ಪಟ್ಟಿದ್ದವು.
ವಿಡಂಬನೆಯನ್ನು ನೈಜವಾಗಿ ತೆರೆಯ ಮೇಲೆ ಚಿತ್ರಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಅದಕ್ಕೆ ಅವರ “ಮಠ “ಮತ್ತು ” ಎದ್ದೇಳು ಮಂಜುನಾಥ” ಚಿತ್ರಗಳು ಉದಾಹರಣೆಗಳಾಗಿವೆ.
“ಮಠ “ಸಿನಿಮಾ ನಿರುದ್ಯೋಗ ಭೂತವು ಸನ್ಯಾಸಿ ,ಮಠ ಗಳನ್ನೂ ಬಿಟ್ಟಿಲ್ಲ ಎಂಬ ಕಚಗುಳಿ, ವಿಡಂಬನೆಯನ್ನ ಎತ್ತಿ ತೋರಿಸುವಂತಿದೆ.
“ಮಠ “ಚಿತ್ರದ ಅಭಿನಯಕ್ಕೆ ಜಗ್ಗೇಶ್ ಅವರಿಗೆ ಪೋಷಕನಟ ಪ್ರಶಸ್ತಿಯೂ ಸಂದಿತ್ತು.
ವಿಡಂಬನೆ ,ಗುರುಪ್ರಸಾದ್ ಅವರ ಅಸ್ರ್ತ.ಅದನ್ನೇ ನವಿರಾಗಿಹೆರಳುವ ಕಲೆ ಅವರಿಗೆ ಕೈವಶವಾಗಿತ್ತು.
Director Guruprasad Death ಅರಳು ಹುರಿದಂತೆ ಮಾತಾಡುತ್ತಿದ್ದರು.
ಅನೇಕರಿಗೆ ನಿರಾಶೆಯಲ್ಲಿದ್ದಾಗ ಬೆನ್ನುತಟ್ಟಿ ಎಚ್ವರಿಸುವ ಸ್ವಭಾವ.
ಆದರೆ ಏಕಾಏಕಿ ನೇಣಿಗೆ ಶರಣಾಗಿರುವದು ಅತ್ಯಂತ ಖೇದಕರ ಸಂಗತಿ.