Naraka Chaturthi ಇಂದು ನರಕಚತುರ್ದಶಿ ಹಬ್ಬ. ಭಾಗವತದಲ್ಲಿ ಹೇಳಿರುವಂತೆ ,ಹಿಂದೆ ಪ್ರಾಗ್ ಜ್ಯೋತಿಷಪುರ ಎಂಬಲ್ಲಿ
ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು.ಅವನು
ದೇವತೆಗಳಿಗೆ ಮತ್ತು ಮಾನವರಿಗೆ ತೊಂದರೆ ಕೊಡು
ತ್ತಿದ್ದ.ರಾಕ್ಷಸನಾದ ನರಕಾಸುರನು ಭೂಮಿತಾಯಿಯ ಮಗ .ಇವನಆಳ್ವಿಕೆಯಲ್ಲಿ ಸಾಕಷ್ಟು ದೌರ್ಜನ್ಯಯಗಳನ್ನು ಎಸಗಿದ್ದ.ಜನರಿಗೆ ಮೋಸಮಾಡಿದ್ದ ಭೂಮಿಯ ಮೇಲೆ ತನ್ನದೇ ಆಡಳಿತ ಮಾಡುತ್ತಾ ದುರಹಂಕಾರಕ್ಕೆ
ಒಳಗಾಗಿದ್ದ ನಂತರ ತಾನು ಸ್ವರ್ಗವನ್ನು ಆಳಬೇಕು
ಎಂದು ಬಯಸಿದ .ಈ ಬಯಕೆಯ ಪ್ರಯುಕ್ತ ಯುದ್ಧ
ಕ್ಕಾಗಿ ಇಂದ್ರದೇವನನ್ನು ಯುದ್ಧಕ್ಕಾಗಿ ಆಹ್ವಾನಿಸಿದನು.ಈ ದುಷ್ಟ ದೈತ್ಯನು ಸ್ತ್ರೀಯರನ್ನು ಕಾಡಿಪೀಡಿಸತೊಡಗಿದನು.
ಅವನು ತಾನು ಜಯಿಸಿ ತಂದಿದ್ದ 16100 ವಿವಾಹ
ಯೋಗ್ಯ ರಾಜ ಕನ್ಯೆಯರನ್ನು ಸೆರೆವಾಸದಲ್ಲಿಟ್ಟು ಅವರರೊಂದಿಗೆ ವಿವಾಹವಾಗುವ ಹುನ್ನಾರ ನಡೆಸಿದ್ದ.ಈ ವಿಷಯವು ಶ್ರೀಕೃಷ್ಣ ಪರಮಾತ್ಮನಿಗೆ ತಿಳಿಯುತ್ತಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನನ್ನು ಸಂಹಾರ ಮಾಡಿ ಸೆರೆಯಲ್ಲಿದ್ದ ರಾಜ ಕನ್ಯೆಯರನ್ನು ಸೆರೆಯಿಂದ ಮುಕ್ತಗೊಳಿಸಿದನು.
Naraka Chaturthi ಕೃಷ್ಣನು ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ
ಯಂದು ನರಕಾಸುರನನ್ನು ಸಂಹರಿಸಿದ. 16000 ರಾಜಪುತ್ರಿಯರನ್ನು ಬಂಧನದಿಂದ ಬಿಡಿಸಿ ಬೆಳಗಿನ ಝಾವ ಮನೆಗೆ ಬಂದುಅಭ್ಯಂಜ ನಸ್ನಾನ ಮಾಡಿದ. ಅಂದಿನಿಂದ ಕೃಷ್ಣಪಕ್ಷದ ಚತುರ್ದಶಿಯನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತಿದೆ. ರಾಜಪುತ್ರಿಯರು ಕೃಷ್ಣನ ಕಡೆಗೆ ಬಂದು ಕೃತಜ್ಞತೆ ಸಲ್ಲಿಸಿ ಸಂಭ್ರಮದಿಂದ ಶ್ರೀಕೃಷ್ಣ ಪರ ಮಾತ್ಮನಿಗೆ ಆರತಿ ಬೆಳಗಿ ಪೂಜಿಸಿದರು.ತಾಯಿ
ಭೂದೇವಿ ಮಗ ನರಕಾಸುರನನ್ನು ಕಳೆದುಕೊಂಡು ದು:ಖಿಸಿದಳು. ಈ ದಿನವನ್ನು ನನ್ನ ಮಗನ ಹೆಸರಿನಿಂದಲೇ ಆಚರಿಸಲ್ಡಲಿ. ಈ ದಿನ ಎಲ್ಲರೂ ನಿನ್ನಂತೆಯೇ ಅಭ್ಯಂಜನ ಸ್ನಾನ ಮಾಡಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿದಳು..
ಶ್ರೀಕೃಷ್ಣ ಪರಮಾತ್ಮ ಭೂದೇವಿಯ ಬೇಡಿಕೆಗೆ ತಥಾಸ್ತು
ಎಂದ .ನರಕ ಎಂದರೆ ಅಜ್ಞಾನ.ಚತುರ್ದಶಿ ಎಂದರೆ ಬೆಳಕು. ಅಜ್ಞಾನಕಳೆದುಸುಜ್ಞಾನದಬೆಳಕುದೊರೆಯ
ಲೆಂದೇ ನರಕ ಚತುರ್ದಶಿಯ ಆಚರಣೆಮಾಡಲಾಗುತ್ತಿದೆ.
ಹೀಗೆ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯನ್ನು ನರಕ ಚತುರ್ದಶಿ ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ನಮ್ಮೊಳಗಿರುವ ನರಕಾಸುರನೆಂಬೊ ಅಜ್ಞಾನವನ್ನು
ಸುಜ್ಞಾನವೆಂಬ ಜ್ಞಾನದ ಸೂರ್ಯನ ಕಿರಣಗಳಿಂದ
ಓಡಿಸೋಣ.