Shivamogga Banjara Sangha ಪಾಳು ಬಿದಿದ್ದ ಜಿಲ್ಲಾ ಬಂಜಾರ ಸಂಘದ ಜಾಗವನ್ನು ಅಭಿವೃದ್ಧಿಪಡಿಸಿ ಸಮುದಾಯ ಭವನ, ನಿರುದ್ಯೋಗಿ ಯುವಕ ಯುವತಿಯರಿಗೆ, ಸ್ಮರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೇಂದ್ರ, ಬಂಜಾರ ಸಮುದಾಯದ ಪ್ರತಿಕವಾದ ವಿಶಿಷ್ಠ ಕಲೆಯಾದ ಹೆಣ್ಣು ಮಕ್ಕಳಿಗೆ ಕಸೂತಿ ತರಬೇತಿ ಕೇಂದ್ರ ಹಾಗೂ ಸಮಾಜದ ಭಾಷೆ, ಉನ್ನತ ಶಿಕ್ಷಣ, ಮೀಸಲಾತಿ ವಿಷಯ ಹಾಗೂ ಸಮಾಜದ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಒಂದು ಕೇಂದ್ರವಾಗಿ ನಿರ್ಮಾಣ ಮಾಡಲಾಗಿದೆ.
ಅಭಿವೃದ್ಧಿ ಕಾರ್ಯವನ್ನು ಜೀರ್ಣಿಸಿಕೊಳ್ಳಲು ಆಗದೆ ಈ ರೀತಿಯ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಇಡಿ ಬಂಜಾರ ಸಮುದಾಯಕ್ಕೆ ಮಸಿ ಬಳಿಯುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ಸಂಘದ ನಿರ್ದೇಶಕ ನಾನ್ಯಾ ನಾಯ್ಕ ಹೇಳಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಆಡಳಿತಾಧಿಕಾರಿ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ವ್ಯಕ್ತಿಗಳು ಕೆಲಸ ಮಾಡಿದ್ದಾರೆ. ಸುಮಾರು 12 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಬಂಜಾರ ಭವನ ನಿರ್ಮಾಣವಾಗಿದೆ. ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ನಡೆದಿದಿ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾದ್ಯಮ ಸ್ಪಷ್ಟನೆ ನೀಡಲಾಗಿದ್ದರೂ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.
Shivamogga Banjara Sangha ಈ ರೀತಿ ಆದೇಶವಾಗಿರುವುದು ನಿರಾಶಾದಾಯಕ ವಿಷಯವಾಗಿದೆ ಎಂದರು.
ಈವಿಷಯಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಹೋರಾಟ ನಡೆಸಿ ಸಮಾಜಕ್ಕೆ ತನ್ನ ಸೇವೆಯನ್ನು ಮುಂದುವರೆಸುವ ವಿಷಯದಲ್ಲಿ ಹಿಂದೆ ಬೀಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಟೀಕೆಗಳು ಸಾಯುತ್ತದೆ, ಅಭಿವೃದ್ಧಿ ಉಳಿಯುತ್ತದೆ .ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು ಆತ್ಮ ವಿಶ್ವಾಸ ಕಳೆದುಕೊಳ್ಳದೇ ಈ ರೀತಿಯ ಕ್ಷುಲ್ಲಕ, ಕೆಲಸ ಮಾಡುವ ಮೂಲಕ ಸಮಾಜದ ಗೌರವಕ್ಕೆ ಧಕ್ಕೆ ತರುತ್ತಿರುವ ವ್ಯಕ್ತಿಗಳಿಗೆ ಕಿವಿ ಹಿಂಡುವ ಕೆಲಸ ಮಾಡುವ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ನಿರ್ದೇಶಕರಾದ ಕುಮಾರ್ ನಾಯ್ಕ್, ಹೀರಾ ನಾಯ್ಕ್, ಬೋಜ್ಯಾ ನಾಯ್ಕ್, ನಾಗೇಶ್ ನಾಯ್ಕ್, ವಾಸುದೇವ ನಾಯ್ಕ್, ಬಸವರಾಜ ನಾಯ್ಕ್ ಮೊದಲಾದವರಿದ್ದರು.