Sunday, November 24, 2024
Sunday, November 24, 2024

Kannnada Sahitya Parishath ನಮ್ಮ ಮಾತೃಭಾಷೆಯನ್ನ ನಾವು ಎಂದಿಗೂ ಬಿಡಬಾರದು. ಶಾಲೆಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಕನ್ನಡವನ್ನ ಹೆಚ್ವು‌ ಮಾತಾಡಬೇಕು- ತಹಶೀಲ್ದಾರ್ ಗಿರೀಶ್

Date:

Kannnada Sahitya Parishath ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹೃದಯಸ್ಪರ್ಶಿ ಭಾಷೆಯಾಗಿದೆ ಎಂದು ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಅವರು ತಿಳಿಸಿದರು.
 ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್ ,ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ,ಕನ್ನಡಪರ ರೈತ ಕಾರ್ಮಿಕ ಸಂಘಟನೆ , ಎನ್‌ಎಸ್‌ಎಸ್,ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್, ರೋಟರಿ, ಲಯನ್ಸ್ ಕ್ಲಬ್, ರೆಡ್ ಕ್ರಾಸ್,ಸ್ತ್ರೀಶಕ್ತಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡದ ರಥಯಾತ್ರೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಅವರು ಪುಪ್ಪನಮನ ಸಲ್ಲಿಸುವ ಮೂಲಕ ಸ್ವಾಗತಿಸಿದರು.
Kannnada Sahitya Parishath ಶಿವಮೊಗ್ಗ  ನಗರದ ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಕುವೆಂಪು ರಂಗಮAದಿರದ ವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಕಲಾ ಮೇಳದೊಂದಿಗೆ ಅದ್ದೂರಿಯಾಗಿ ರಥಯಾತ್ರೆ ನಡೆಸಲಾಯಿತು.
 ಕುವೆಂಪು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಮಾತನಾಡಿದರೆ ಕೆಲವು ಶಾಲೆಗಳಲ್ಲಿ ದಂಡ ಹಾಕುತ್ತಾರೆ ಎನ್ನುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಕನ್ನಡ ನಾಡಿನಲ್ಲಿಯೇ ಈ ಪರಿಸ್ಥಿತಿ ಇದ್ದು, ಇದು ಅತ್ಯಂತ ವಿಷಾಧನೀಯ.ಈ ರೀತಿಯ ಘಟನೆಗಳು ನಡೆಯಬಾರದು. ಕನ್ನಡ ಭಾಷೆಯಲ್ಲಿ ನಮ್ಮ ಭಾವನೆತುಂಬಿರುತ್ತದೆ. ಅನ್ಯಭಾಷೆ ಕಲಿಕೆ ನಮ್ಮ ಜೀವನಕ್ಕೆ ಅಗತ್ಯ ಅದರೆ ನಮ್ಮ ಮಾತೃ ಭಾಷೆಯನ್ನು ನಾವು ಎಂದಿಗೂ ಬಿಡಬಾರದು ಶಾಲೆಗಳಲ್ಲಿ ಹಾಗೂ ನಮ್ಮ ಉದ್ಯೋಗದ ಸ್ಥಳಗಳಲ್ಲಿ ಕನ್ನಡಭಾಷೆಯನ್ನು ನಾವು ಹೆಚ್ಚು ಮಾತನಾಡಬೇಕು ಎಂದರು.
 ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21, ಮತ್ತು 22 ರಂದು ನಡೆಸಲಾಗುತ್ತಿದ್ದು ಅದರ ಅಂಗವಾಗಿ ಇಡೀ ರಾಜ್ಯಾದ್ಯಂತ ಕನ್ನಡ ಜ್ಯೋತಿ ಹೊತ್ತ ರಥ ಸಂಚಾರ ಮಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ಕನ್ನಡವನ್ನು ಕಟ್ಟುವ ಕೆಲಸಕ್ಕೆ ಎಲ್ಲರೂ ಜೊತೆಯಾಗಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಅಧ್ಯಕ್ಷ ಚಂದ್ರಭೂಪಾಲ್, ಮಾಜಿ ಎಂಎಲ್ಸಿ ಆರ್ ಪ್ರಸನ್ನಕುಮಾರ್, ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು, ವಿವಿಧ ಕನ್ನಡಪರ ಸಂಘಟನೆ ಸದಸ್ಯರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...