Ministry of Youth Affairs and Sports ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮತ್ತೊಂದು ಅಭಿಯಾನವಾದ “ಏಕ್ ಪೆಡ್ ಮಾ ಕೆ ನಾಮ್” 2024ರ ವಿಶ್ವ ಪರಿಸರ ದಿನದಂದು ಗೌರವಾನ್ವಿತ ಪ್ರಧಾನ ಮಂತ್ರಿಯವರು ನವದೆಹಲಿಯ ಬುದ್ದ ಜಯಂತಿ ಪಾರ್ಕ್ ನಲ್ಲಿ ಪೀಪಲ್ ಮರದ ಸಸಿ ನೆಡುವುದರ ಮೂಲಕ ಪ್ರಾರಂಭಿಸಿದರು.
ತಾಯಿ ಭೂಮಿಯನ್ನು ಹೋಲುವ ಶಕ್ತಿಯಾಗಿದ್ದು ಇದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು.ಜನರು ತಮ್ಮ ತಾಯಿಯ ಮೇಲೆ ಪ್ರೀತಿ,ಗೌರವವನ್ನು ತೋರಿಸುತ್ತಾರೆ. ಈ ಮಹತ್ವಕಾಂಶ ಕಾರ್ಯಕ್ರಮವನ್ನು ದಿನಾಂಕ 25.10.2024 ರಂದು ನೆಹರು ಯುವ ಕೇಂದ್ರ, ಶಿವಮೊಗ್ಗ ಮತ್ತು ಮುಖಾ ಮುಖಿ ರಂಗ ತಂಡ ಹಾಗೂ ನಿರ್ಮಲ ತುಂಗ-ಭದ್ರ ಅಭಿಯಾನ, ಶ್ರೀ.ರಾಮಕೃಷ್ಣ ಐ.ಟಿ.ಐ ಕಾಲೇಜು, ಮಹಿಳಾ ಪಾಲಿಟೆಕ್ನಿಕ್ ಕಾಲೇಜು,ಶಿವಮೊಗ್ಗ ಇವರ ಸಹಯೋಗದೊಂದಿಗೆ “ ಏಕ್ ಪೇಡ್ ಮಾ ಕೆ ನಾಮ್” ಅಪ್ಪರ್ ತುಂಗಾ ಚಾನಲ್ ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
Ministry of Youth Affairs and Sports ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿಯಾದ ಶ್ರೀ. ವಿಜಯ್ ಕುಮಾರ್ ರವರು ಗಿಡ ನೆಡುವುದರ ಮುಲಕ ಚಾಲನೆ ನೀಡಿದರು. ಕಾರ್ಯಕ್ರಮ ಕುರಿತಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಶ್ರೀ. ಉಲ್ಲಾಸ್ ಕೆ.ಟಿ.ಕೆ ಮತ್ತು ಶಿವಮೊಗ್ಗ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರಾದ ಬಾಲಕೃಷ್ಣ ನಾಯ್ಡುರವರು ಈಗಿನ ಕಾಂಕ್ರೀಟ್ ನಾಡಿನಲ್ಲಿ ಗಿಡ ಮರಗಳು ಕಾಣೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಬೇಕು ಇದರಿಂದ ಪರಿಸರದಲ್ಲಿ ಒಳ್ಳೆ ಗಾಳಿ ಮತ್ತು ಶುದ್ಧ ನೀರು .ಉತ್ತಮ ಪರಿಸರದ ವಾತಾವಣವು ಶುದ್ಧವಾಗಿರುತ್ತದೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಷಣ್ಮುಖಪ್ಪ ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಮಹಿಳಾ ಪಾಲಿಟೆಕ್ನಿಕ್ ನ ಎನ್ಎಸ್ ಎಸ್ ಅಧಿಕಾರಿ ಶ್ರಿಮತಿ ಜ್ಯೋತಿ, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ರಂಗ ತಂಡದ ಮಂಜು ರಂಗಾಯಣ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಗೊಳಿಸಿದರು.