Rotary Shivamogga Jubilee ಅನಿಶ್ಚಿತ ಸಂದರ್ಭದಲ್ಲಿ ಕೆಲವು ಮಕ್ಕಳು ಅನಾಥರಾಗುತ್ತಾರೆ ಅವರನ್ನು ಗುರ್ತಿಸಿ ಸರಿದಾರಿಯಲ್ಲಿ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತ ನಾಗರಿಕರ ಧರ್ಮ ಎಂದು ರೋಟರಿ ಶಿವಮೊಗ್ಗ ಜ್ಯುಬಿಲಿ “ತಾಯಿ ಮನೆ”ಯಲ್ಲಿ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ರೂಪ ಪುಣ್ಯಕೋಟಿ ಹೇಳಿದರು.
ಸ್ವಾರ್ಥಪೂರ್ಣ ಸಮಾಜದಲ್ಲಿ, ಕೆಲವು ಸ್ವಹಿತ ಮೀರಿದ ಸೇವೆಗೆ ತೊಡಗಿಕೊಂಡಿರುವವರಿಂದ ಕೆಲವು ಮಕ್ಕಳು ಉತ್ತಮ ಶಿಕ್ಷಣ ಹೊಂದಿ ಸಮಾಜದ ಏಳಿಗೆಗೆ ದುಡಿಯಲು ಸಹಕಾರಿ ಯಾಗಿದೆ ಎಂದರು. ಮಾಜಿ ಅಧ್ಯಕ್ಷ ಎಸ್.ಎಸ್.ವಾಗೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನೊಂದ ಮಕ್ಕಳ ಕಷ್ಟಕ್ಕೆ ಮರುಗಿ, ಕೆಲವರ ಸಹಕಾರದಿಂದ 2009ರಲ್ಲಿ ಪ್ರಾಂಭಿಸಿದ ಈ ತಾಯಿ ಮನೆ ಇಂದು ಹಲವು ಸಂಘ ಸಂಸ್ಥೆಗಳ ಸಹಕಾರದಿಂದ, ಯಾವುದೇ ಪ್ರಚಾರಕ್ಕೆ ಒತ್ತು ಕೊಡದೆ ತಮ್ಮದೇ ಸಿದ್ದಾಂತದಿಂದ ಶಿವಮೊಗ್ಗ ಆಸ್ತಿಯಾಗಿದೆ ಎಂದರು.
Rotary Shivamogga Jubilee ತಾಯಿಮನೆ ಸ್ಥಾಪಕ ಸುದರ್ಶನ್ ಮಾತನಾಡುತ್ತಾ, ಕನಿಷ್ಟ ಸಹಕಾರವಿಲ್ಲದ ಮಕ್ಕಳ ಏಳಿಗೆಗೆ ಪಣತೊಟ್ಟು ಇಂದು ನಾಲ್ಕುನೂರ ಐವತ್ತು ಮಕ್ಕಳ ಜೀವನಕ್ಕೆ ದಾರಿ ದೀಪವಾಗಿರುವ ಹೆಮ್ಮೆ ನಮಗಿದೆ. ಇಂದು ನೂರಕ್ಕಿಂತ ಹೆಚ್ಚು ಮಕ್ಕಳು ಅರ್ಜಿ ನೊಂದಾಯಿಸುತ್ತಾರೆ. ಆದರೆ ಅತ್ಯಂತ ಅವಶ್ಯಕವಿರುವ ನಿರ್ಗತಿಕರು, ನಮ್ಮಲ್ಲಿ ಇರುವ ಅನುಕೂಲ ನೋಡಿ ಕೊಂಡು ಸೇರಿಸಿ ಕೊಳ್ಳುತ್ತೇವೆ.
ನಮ್ಮಲ್ಲಿ ಬೆಳೆದ ಮಕ್ಕಳು ಐಎಎಸ್ ಇನ್ನೂ ಅನೇಕ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದಲು ಅನಾಸಕ್ತಿ ತೋರುವ ಮಕ್ಕಳಿಗೆ ಜೀವನೊಪಯಕ್ಕೆ ದುಡಿಯಲು ಎಲೆಕ್ಟ್ರೀಕಲ್, ಪ್ಲಂಬರ್ ಮುಂತಾದ ಕೈಕೆಲಸ ಕಲಿಸುತ್ತೇವೆ.
ಅನಾತ ಎಂಬ ಬಾವನೆ ಬರಬಾರದು ಎಂದು ನಮ್ಮ ಮನೆ ಎಂದು ಹೆಸರಿಟ್ಟಿದ್ದೇವೆ. ಶಿವಮೊಗ್ಗದ ನಾಗರಿಕರು, ಸಂಘ ಸಂಸ್ಥೆಗಳ ಸಹಕಾರದಿಂದ ಈ ಕಾರ್ಯ ನಡೆಸಿಕೊಂಡು ಬಂದಿದ್ದೇವೆ. ಇಂದು ರೋಟರಿ ಜ್ಯೂಬಿಲಿ ಸದಸ್ಯರು ಮಕ್ಕಳಿಗೆ ದಿನ ನಿತ್ಯದ ಊಟಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನು ನೀಡಿದ್ದು ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.
ರೇಣುಕಾರಾಧ್ಯ ಸ್ವಾಗತಿಸಿದರು ಸತ್ಯನಾರಾಯಣ್ ವಂದಿಸಿ ಡಾ.ಗುರುಪಾದಪ್ಪ ನಿರೂಪಿಸಿದರು.
Rotary Shivamogga Jubilee ಅನಾಥ ಮಕ್ಕಳನ್ನ ಸಮಾಜದ ಮುಖ್ಯವಾಹಿನಿಗೆ ತರುವುದು ಪ್ರಜ್ಞಾವಂತ ನಾಗರೀಕರ ಜವಾಬ್ದಾರಿ- ರೂಪ ಪುಣ್ಯಕೋಟಿ
Date: