Wednesday, November 6, 2024
Wednesday, November 6, 2024

Shimoga Basavakendra ಟೀವಿ ಮಾಧ್ಯಮಗಳ ಜೊತೆ ಇಂದು ಮೊಬೈಲ್ ವಿರುದ್ಧವೂ ಕಂಪನಿ ನಾಟಕಗಳು ಸೆಣೆಸಬೇಕಾಗಿದೆ- ಬಸವರಾಜ ಬೆಂಗೇರಿ

Date:

Shimoga Basavakendra ಇಂದಿನ ಮನರಂಜನೆ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಉತ್ತಮ ಅಭಿರುಚಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗದ ಬಸವಕೇಂದ್ರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಿನೆಮಾ, ಟಿವಿ ಮಾಧ್ಯಮಗಳ ಜೊತೆಗೆ ಇಂದು ಮೊಬೈಲ್‍ ವಿರುದ್ಧವೂ ಕಂಪನಿ ನಾಟಕಗಳು ಸೆಣೆಸಬೇಕಾಗಿದೆ ಎಂದು ಹೇಳಿದರು.
ದ್ವಂದ್ವಾರ್ಥ ಸಂಭಾಷಣೆಗಳಿಂದ ಒಂದು ವರ್ಗದ ಪ್ರೇಕ್ಷಕರನ್ನು ಸೆಳೆದಿದ್ದ ಕಂಪನಿ ನಾಟಕಗಳು ಇದೇ ಸಂದರ್ಭದಲ್ಲಿ ಸದಭಿರುಚಿಯ ಬಹುದೊಡ್ಡ ಪ್ರೇಕ್ಷಕ ವರ್ಗವನ್ನು ಕಳೆದುಕೊಂಡಿದೆ. ಇದನ್ನು ಅರ್ಥ ಮಾಡಿಕೊಂಡ ಕೆಲ ಕಂಪನಿಗಳು ಮರಳಿ ಉತ್ತಮ ಗುಣಮಟ್ಟದ ನಾಟಕಗಳನ್ನು ಪ್ರದರ್ಶಿಸುವ ಕೆಲಸ ಮಾಡುತ್ತಿವೆ ಎಂದರು.
ಎಂ.ಎಂ.ಕಲ್ಬುರ್ಗಿ, ಪಟೀಲ ಪುಟ್ಟಪ್ಪ, ಚನ್ನವೀರ ಕಣವಿ ಮುಂತಾದವರ ಮಾರ್ಗದರ್ಶನದಲ್ಲಿ ಕಟ್ಟಿದ ವಿಶ್ವಭಾರತಿ ಕನ್ನಡ ನಾಟಕ ಕಂಪನಿ ಮೂಲಕ ಸದಭಿರುಚಿಯ ಹಾಗೂ ವಿಶ್ವದಾರ್ಶನಿಕರ ಕತೆಗಳನ್ನು ರಂಗಕ್ಕೆ ತರಲಾಗಿದೆ. ಆದರೆ, ಇಂತ ಮಹತ್ವದ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಕಾಡಿದ್ದು ವಿಪರ್ಯಾಸ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಅಸಭ್ಯ, ಅನೈತಿಕ, ಅನಾರೋಗ್ಯಕರ ವ್ಯಕ್ತಿತ್ವಗಳೇ ಇಂದಿನ ಯುವ ಜನರ ರೋಲ್ ಮಾಡೆಲ್ ಆಗುತ್ತಿರುವುದು ದುರಂತ ಎಂದರು.
ಕೀಳು ಅಭಿರುಚಿಯನ್ನು ಬೆಳೆಸುವುದೇ ಆದರ್ಶ ಎಂದು ಸಿನೆಮಾ-ಟಿವಿಗಳಲ್ಲಿ ತೋರಿಸಲಾಗುತ್ತಿದೆ. ಇಂಥ ಪರಿಸರದಲ್ಲಿ ಸ್ವಸ್ಥ ಸಮಾಜ ಕಟ್ಟುವ ಹೊಣೆ ಎಲ್ಲರ ಮೇಲಿದೆ ಎಂದರು.
Shimoga Basavakendra ನಮ್ಮ ನಡುವೆ ಇರುವ ಯುವ ಜನರ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಅಭಿರುಚಿ ಬೆಳೆಸುವ ಕೆಲಸ ಆಗಬೇಕಿದೆ. ಕಂಪನಿ ನಾಟಕಗಳಲ್ಲಿ ಆದರ್ಶ ವ್ಯಕ್ತಿಗಳ ಕತೆಗಳನ್ನು ರಂಗರೂಪಕ್ಕೆ ತರುವ ಮಾದರಿ ಕೆಲಸ ಆರಂಭದಿಂದಲೂ ಆಗಿದೆ. ಇಂಥ ಕೆಲಸ ಮಾಡಿದ ರಂಗಕರ್ಮಿಗಳು ಆರ್ಥಿಕವಾಗಿ ನಷ್ಟ ಅನುಭವಿಸಿರಬಹುದು. ಆದರೆ, ನೈತಿಕವಾಗಿ ಶ್ರೀಮಂತರಾಗಿದ್ದಾರೆ ಎಂದು ಹೇಳಿದರು.
ಹಿರಿಯ ರಂಗಕರ್ಮಿ ಡಾ.ಸಾಸ್ವೇಹಳ್ಳಿ ಸತೀಶ್‍ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಕಾಂತೇಶ್ ಕದರಮಂಡಲಗಿ, ರಂಗ ಸಮಾಜದ ಮಾಜಿ ಸದಸ್ಯರಾದ ಹಾಲಸ್ವಾಮಿ ಆರ್‍.ಎಸ್. ಹಾಗೂ ಬಸವಕೇಂದ್ರದ ಉಪಾಧ್ಯಕ್ಷರಾದ ಚಂದ್ರಪ್ಪ ವೇದಿಕೆಯಲ್ಲಿ ಇದ್ದರು. ರಂಗಕರ್ಮಿ ಗಣೇಶ್ ಕೆಂಚನಾಲ ನಿರೂಪಸಿದರು. ಡಾ. ಹಿರೇಮಠ ಅವರು ಸನ್ಮಾನ ಪತ್ರ ವಾಚನ ಮಾಡಿದರು.
ಎಂ. ಚನ್ನಪ್ಪ ಮತ್ತು ಕುಟುಂಬ, ಹೊನ್ನಾಳಿ ತಾಲೂಕು ಕುಂದೂರ ಜಿ. ಹನುಮಂತಪ್ಪ ಮತ್ತು ಕುಟುಂಬ, ಪುಷ್ಪಾ ಜಯದೇವಪ್ಪ ನವಾತಿ ಮತ್ತು ಕುಟುಂಬದ ದತ್ತಿಯಡಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.


ಶಿವಮೊಗ್ಗ ಬಸವಕೇಂದ್ರದಲ್ಲಿ ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ರಂಗರ್ಮಿಗಳಾದ ಡಾ. ಸಾಸ್ವೇಹಳ್ಳಿ ಸತೀಶ್‍, ಡಾ.ಗಣೇಶ್ ಕೆಂಚಾನಾಲ, ಕಾಂತೇಶ್ ಕದರಮಂಡಲಗಿ, ಹಾಲಸ್ವಾಮಿ ಆರ್.ಎಸ್. ಡಾ. ಹಿರೇಮಠ ಹಾಗೂ ಬಸವಕೇಂದ್ರದ ಚಂದ್ರಪ್ಪ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddhramaiah ಮೂಡಾ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿ ಸೀಎಂ ಸಿದ್ಧರಾಮಯ್ಯ ಹೇಳಿದ್ದೇನು?

CM Siddhramaiah ಮುಡಾ ಪ್ರಕರಣ ಸಂಬಂಧ ಇಂದು( ಬುಧವಾರ) ಲೋಕಾಯುಕ್ತ...

Dnaneshwari Goshala ಗೋಪೂಜೆಯಿಂದ ಮನಸ್ಸಿಗೆ ಶಾಂತಿ & ನೆಮ್ಮದಿ- ಚಂದ್ರಹಾಸ.ಪಿ‌.ರಾಯ್ಕರ್

Dnaneshwari Goshala ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ...

Election Commission ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಮತದಾರರ ಪಟ್ಟಿ ಪ್ರಕಟಣೆ

Election Commission ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬAಧಿಸಿದAತೆ...