Omar Abdullah ನ್ಯಾಷನಲ್ ಕಾನ್ಫರೆನ್ಸ್ “ಕಾಶ್ಮೀರಿ ಹಿಂದೂಗಳು ತಮ್ಮ ಮನೆಗಳಿಗೆ ಮರಳುವ ಸಮಯ ಬಂದಿದೆ” ಎಂದು ಘೋಷಿಸುತ್ತದೆ
ಕಾಶ್ಮೀರಿ ಪಂಡಿತರು ಮತ್ತು ಜಮ್ಮುವಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಅವರು ಕೆಲಸ ಮಾಡುತ್ತಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಘೋಷಿಸುತ್ತದೆ.
Omar Abdullah “ನಾವು ಭಾರತೀಯರು ಮತ್ತು ನಾವು ಎಲ್ಲರನ್ನು ಕರೆದುಕೊಂಡು ಹೋಗಲು ಬಯಸುತ್ತೇವೆ”
ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಅವರು ತಮ್ಮ ಪಕ್ಷ ಆಡಳಿತಕ್ಕೆ ಬರುವ ಭರವಸೆ ಬಂದ ಕ್ಷಣ ಈ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ .
ಇಂಡಿ ಸಮೂಹದ ಕೆಲವು ಪಕ್ಷಗಳಿಗೆ ಒಮರ್ ಅಬ್ದುಲ್ಲ ಹೇಳಿಕೆ ಕೊಂಚ ಇರಿಸುಮುರಿಸಾಗುವುದೇನೊ?.
ಇಲ್ಲಿಯವರೆಗೂ ಪ್ರತ್ಯೇಕ ಕಾಶ್ಮೀರಕ್ಕೆ ಹಾತೊರೆಯುತ್ತಿದ್ದ ಮಿತ್ರ ಪಕ್ಷಗಳು ಈಗ
ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.
ಜಮ್ಮು ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಕಾಶ್ಮೀರ ಭಾಗದಲ್ಲಿ ಒಮರ್ ಅಬ್ದುಲ್ಲ ಅವರ ಎನ್ ಸಿ. ಪಕ್ಷ ಪ್ರಬಲವಾಗಿದೆ. ಇಂಡಿ ಸಮೂಹದ ಕಾಂಗ್ರೆಸ್ ,ಇತರ ಪಕ್ಷಗಳೀಗ ವಾಸ್ತವ ಪರಿಸ್ಥಿತಿಗನುಗುಣವಾಗಿ ತಮ್ಮ ಧೋರಣೆಯನ್ನ ಬದಲಿಸಿಕೊಳ್ಳುವ ಜರೂರು ಉಂಟಾಗಿದೆ. ಕಾಂಗ್ರೆಸ್ ಕೇವಲ ಒನ್ ಪಾಯಿಂಟ್ ಅಜೆಂಡ ಆಗಿ” ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ದಕ್ಕಬೇಕು ಎಂದು ಒಂದೇ ಸ್ವರವೆತ್ತಿದೆ.
370 ನೇ ವಿಧಿ ರದ್ದತಿಯನ್ನ ಒಪ್ಪಿಕೊಂಡ ಮನಸ್ಥಿತಿ ತೋರಿಸಲು ಇನ್ನು ಅವಕ್ಕೆ ಏನೋ ಮುಜುಗರ ಆದಂತಿದೆ.
ಇಡೀ ದೇಶದ ಜನ 370 ನೇ ವಿಧಿ ರದ್ದತಿ ಸ್ವಾಗತಿಸಿದರೆ ಕಾಂಗ್ರೆಸ್ ಮುಂತಾದ ಪಕ್ಷಗಳು ಯಾಕೆ ಸ್ಪಷ್ಡ ಪ್ರತಿಕ್ರಿಯೆ ನೀಡಿಲ್ಲ ಎಂಬುದೇ ಯಕ್ಷ ಪ್ರಶ್ನೆ.