Sirsi Marikamba Temple ವಿಶ್ವವಿಖ್ಯಾತ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಸಂಬಂಧಿಸಿದಂತೆ ಹೊಸದೊಂದು ನಿಯಮಾವಳಿ ಜಾರಿಗೆ ತರಲಾಗಿದೆ. ದೇವಸ್ಥಾನದ ಆಡಳಿತ ಕಮಿಟಿ ಡ್ರೆಸ್ ಕೋಡ್ ಜಾರಿಗೊಳಿಸಿದ್ದು, ಸಂಪ್ರದಾಯಕ್ಕನುಗುಣವಾದ ಉಡುಗೆಗಳನ್ನು ಧರಿಸಿ ಬರುವಂತೆ ಸೂಚನೆ ನೀಡಿದೆ.
ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನು ಜಾರಿ ಮಾಡಲಾಗಿದೆ. ದೇವಸ್ಥಾನದ ಆಡಳಿತ ಕಮಿಟಿಯು ಡ್ರೆಸ್ ಕೋಡ್ ಜಾರಿಗೊಳಿಸಿದ್ದು, ಸಂಪ್ರದಾಯಕ್ಕನುಗುಣವಾದ ಉಡುಗೆಗಳನ್ನು ಧರಿಸಿ ಬರುವಂತೆ ಸೂಚನೆ ನೀಡಿದೆ.
Sirsi Marikamba Temple ವಸ್ತ್ರಸಂಹಿತೆ ನಿಯಮ ಜಾರಿಗೊಳಿಸಿರುವ ಬಗ್ಗೆ ಮಾರಿಕಾಂಬಾ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಈ ಹಿಂದೆ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿಯೂ ವಸ್ತ್ರಸಂಹಿತೆಯನ್ನು ಜಾರಿ ಮಾಡಲಾಗಿತ್ತು. ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ.
ದೇಗುಲಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆಯಬೇಕೆಂದು ಮುಜರಾಯಿ ಇಲಾಖೆ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ರಾಜ್ಯದ ವಿವಿಧ ದೇಗುಲಗಳಲ್ಲಿ ಈಗಾಗಲೇ ವಸ್ತ್ರಸಂಹಿತೆಯನ್ನು ಕಡ್ಡಾಯ ಮಾಡಲಾಗಿದೆ. ಈಗ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿಯೂ ವಸ್ತ್ರಸಂಹಿತೆ ಕಡ್ಡಾಯ ನಿಯಮ ಜಾರಿಗೆ ಬಂದಿದೆ.
ದೇಗುಲದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ:
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ದೇಗುಲದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಕಡ್ಡಾಯ ಮಾಡುವ ಉದ್ದೇಶವಿದೆ.
ಭಕ್ತರ ಸ್ಪಂದನೆ ಪರಿಗಣಿಸಿ
ಮುಂದಿನ ಹೆಜ್ಜೆ :
ಇದಕ್ಕೆ ಸಂಬಂಧಿಸಿದಂತೆ ಶಿರಸಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ್ ಮಾತನಾಡಿ, ದೇವಸ್ಥಾನಕ್ಕೆ ಹೋಗುವಾಗ ಸಂಪ್ರದಾಯ ಪಾಲನೆ ಮಾಡಬೇಕೆಂಬ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ಭಕ್ತರ ಸ್ಪಂದನೆ ಕೂಡಾ ಪರಿಗಣಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.