Wednesday, November 20, 2024
Wednesday, November 20, 2024

Big Boss Kannada “ಜಗದೀಶ್ ಅವರನ್ನ ಲಾಯರ್ ಎಂದು ಕರೆಯಬೇಡಿ” ವಕೀಲರ ಸಂಘದ ಪತ್ರ

Date:

Big Boss Kannada ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಜಗದೀಶ್ ಆಟಾಟೋಪ ಮೀತಿ ಮೀರಿ ನಡೆಯುತ್ತಿದ್ದು ಬಿಗ್ ಬಾಸ್ ಸ್ಪರ್ಧಿಗಳಿಗೆ ಹೆಚ್ಚು ಪೀಕಲಾಟಕ್ಕೆ ಕಾರಣವಾಗಿದೆ. ಅಲ್ಲದೆ ಪದೇ ಪದೇ ಮನೆಯಿಂದ ಆಚೆ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಮೂಲಕ ಪ್ರತಿಸ್ಪರ್ಧಿಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ತಾನು ವಕೀಲ ಎಂಬ ಮನೋ ಧೈರ್ಯ. ಆದರೆ ಜಗದೀಶ್ ಅವರು ನಿಜಕ್ಕೂ ಲಾಯರ್ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಇದಕ್ಕೆ ಕಾರಣವಾಗಿರುವುದು ಬೆಂಗಳೂರು ವಕೀಲರ ಸಂಘ, ಕಲರ್ಸ್ ಕನ್ನಡ ವಾಹಿನಿಗೆ ಬರೆದಿರುವ ಪತ್ರ. ಹೌದು ಕೆ.ಎನ್ ಜಗದೀಶ್ ಅವರನ್ನು ಲಾಯರ್ ಎಂದು ಕರೆಯಬಾರದು ಎಂದು ವಕೀಲರ ಸಂಘವು ತಾಕೀತು ಮಾಡಿದೆ. ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತಿ ದೊಡ್ಡ ಸಂಘವಾಗಿದ್ದು, ಸಮಾಜದಲ್ಲಿ ಅದರ ಘನತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದೆ. ನಮ್ಮ ಸಂಘವು ಸುಮಾರು 25 ಸಾವಿರಕ್ಕೂ ಹೆಚ್ಚು ವಕೀಲ ಸದಸ್ಯರನ್ನು ಹೊಂದಿದೆ.

ವಕೀಲರ ಸಮುದಾಯವು ದಿನನಿತ್ಯದ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಅತ್ಯಂತ ಗೌರವಪೂರ್ವಕವಾಗಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆಗೆ ಯಾವುದೇ ವ್ಯಕ್ತಿಗಳು ಮಸಿ ಬಳಿಯಲು ಪ್ರಯತ್ನಪಟ್ಟರೆ ಅದನ್ನು ಸಹಿಸಲು ಆಗುವುದಿಲ್ಲ.
ತಮ್ಮ ಚಾನಲ್‌ನಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿರುವ ಕೆ.ಎನ್ ಜಗದೀಶ್‌ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಪ್ರಸಾರ ಕಾರ್ಯಕ್ರಮದಲ್ಲಿ ಅವರನ್ನು ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿರುತ್ತದೆ ಮತ್ತು ಅನೇಕ ವಕೀಲರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

Big Boss Kannada ಈ ಹಿಂದೆಯೇ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ಕರ್ನಾಟಕ ರಾಜ್ಯದಲ್ಲಿ ಕಾನೂನು ವೃತ್ತಿ ನಡೆಸದಂತೆ ಕೆ.ಎನ್. ಜಗದೀಶ್‌ ಅವರಿಗೆ ಆದೇಶ ಹೊರಡಿಸಿದೆ. ದೆಹಲಿ ಬಾರ್ ಕೌನ್ಸಿಲ್‌ ಕೆ.ಎನ್‌ ಜಗದೀಶ್‌ ದೆಹಲಿ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Kannada and Culture ಶಿವಮೊಗ್ಗ ಜಿಲ್ಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ- ಉಮೇಶ್ ಹಾಲಾಡಿ

Department of Kannada and Culture ಸಾಂಸ್ಕೃತಿಕ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ...