JCI Shivamogga ಜೆಸಿಐ ಇಂಡಿಯಾ ವಲಯ -24 ಅಧ್ಯಕ್ಷರಾಗಿ ಶ್ರೀ ಗೌರೀಶ್ ಭಾರ್ಗವ ಇವರು ಆಯ್ಕೆ: ಶಿವಮೊಗ್ಗ ಮಲ್ನಾಡ್ ಘಟಕದ ಪ್ರತಿನಿಧಿ ಚುನಾವಣೆಯಲ್ಲಿ ಸ್ಪರ್ದಿಸಿ, ಜೆಸಿ ವಲಯ -24 ಅಧ್ಯಕ್ಷರಾಗಿ ಜೆಸಿಐ ಸನೆಟರ್ ಶ್ರೀ ಗೌರೀಶ್ ಭಾರ್ಗವ ಆಯ್ಕೆ ಆಗಿದ್ದಾರೆ.ಉಪಾದ್ಯಕ್ಷರುಗಳಾಗಿ ಹೊಸಪೇಟೆ ಹೆರಿಟೇಜ್ ಘಟಕದ ಜೆಸಿ ತ್ಯಾಗರಾಜ್, ಜೆಸಿಐ ಶಿಕಾರಿಪುರ ಚಂದನ ಘಟಕದ ಜೆಸಿ ವಿನೂತ್, ಶಿವಮೊಗ್ಗ ಮೆಟ್ರೂ ಘಟಕದ ಜೆಸಿ. ಪ್ರಮೊದು ಶಾಸ್ತ್ರಿ ಮತ್ತು ಹೊಸನಗರ ಡೈಮಂಡ್ ಘಟಕದ ಜೆಸಿ. ಮದುಸೂದನ್ ನಾವಡ ಆಯ್ಕೆ ಆಗಿದ್ದಾರೆ. ಶಿವಮೊಗ್ಗದ ಈಡಿಗರ ಸಭಾ ಭವನದಲ್ಲಿ ಆಕ್ಟೊಬರ್ 5 ಮತ್ತು 6 ರಂದು ಶಿವಮೊಗ್ಗದಲ್ಲಿ ನೆಡೆದ ವಲಯ ಸಮ್ಮೇಳದಲ್ಲಿ ಈ ಆಯ್ಕೆ ಪ್ರಕ್ರಿಯೆ ನೆಡೆಯಿತು. ವಿಜೃಂಭಣೆಯಿಂದ ನೆಡೆದ ಈ ಸಮ್ಮೇಳನದ ಅಥಿತ್ಯ ಜೆಸಿಐ ಶಿವಮೊಗ್ಗ ಶರಾವತಿ ಘಟಕ ವಹಿಸಿತ್ತು.
JCI Shivamogga 2024ರ ವಲಯ ಅಧ್ಯಕ್ಷ ಜೆಸಿ. ಚನ್ನವೀರೇಶ್ ಸಮ್ಮೇಳನದ ಅದ್ಯಕ್ಷತೆ ವಹಿಸಿದ್ದರೂ. ಜೆಸಿಐ ಇಂಡಿಯಾದ ಆಡಳಿತಾತ್ಮಕ ಸಮಿತಿಯ ಸದಸ್ಯ ಜೆಸಿ ಸುಕುಮಾರ ಸಮ್ಮೇಳನವನ್ನು ಉದ್ಘಾಟಿಸಿದರು, ರಾಜ್ಯ ಕಾಂಗ್ರೆಸ್ ನಾಯಕ ಶ್ರಿ. ಶ್ರೀಕಾಂತ ಇವರು ಮುಖ್ಯ ಆಥಿತಿಗಳಾಗಿ ಭಾಗವಹಿಸಿದರು. ಜೆಸಿಐದ ಪ್ರತಿನಿಧಿಯಾಗಿ ಜೆ.ಎಫ್.ಐ. ಹರ್ಷವರ್ದನ್ ರೆಡ್ಡಿ ಉಪಸ್ಥಿತರಿದ್ದು ಸಮ್ಮೇಳನ ಯಶಸ್ವಿಗೊಳಿಸಿದರು.