Friday, June 19, 2026
Friday, June 19, 2026

Shimoga Dasara ಅಕ್ಟೋಬರ್ 8 & 9 ರಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಬಾಳೆ ಹಣ್ಣು ತಿನ್ನುವ & ಅಮ್ಮ ಮಗನಿಗೆ ತಿನಿಸು ತಯಾರಿಕೆ ಸ್ಪರ್ಧೆ

Date:

Shimoga Dasara ಶಿವಮೊಗ್ಗ ಅಕ್ಟೋಬರ್ 05 ಶಿವಮೊಗ್ಗ ಮಹಾನಗರ ಪಾಲಿಕೆಯು ನಾಡ ದಸರಾ 2024ರ ಪ್ರಯುಕ್ತ ಆಹಾರ ದಸರಾ ಸಮಿತಿ ವತಿಯಿಂದ ನಗರದ ಸಾರ್ವಜನಿಕರಿಗೆ ವಿವಿಧ ಸ್ಥಳಗಳಲ್ಲಿ ವಿವಿಧ ದಿನಾಂಕಗಳAದು ಆಹಾರ ಮೇಳ, ಆಹಾರ ತಿನ್ನುವ ಸ್ಪರ್ಧೆ ಹಾಗೂ ಆಹಾರ ತಯಾರಿಸುವ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಅ.08 ರಂದು ಸಂಜೆ 6.00 ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಆಹಾರ ಮೇಳ ಏರ್ಪಡಿಸಲಾಗಿದ್ದು, ಸುಮಾರು 40 ಸ್ಟಾಲ್‌ಗಳನ್ನು ನಿರ್ಮಿಸಿ ಜಿಲ್ಲೆಯ ವಿವಿಧ ಖಾಧ್ಯಗಳ ಪ್ರದರ್ಶನ ಮತ್ತು ಮಾರಾಟ ಸ್ಟಾಲ್‌ಗಳನ್ನು ಆಯೋಜಿಸಲಾಗಿದೆ.
ಅ.09 ರಂದು ಬೆಳಗ್ಗೆ 10.30ರಿಂದ ಶಿವಪ್ಪ ನಾಯಕ ವೃತ್ತದಲ್ಲಿ ಆಹಾರ ತಿನ್ನುವ ಸ್ಪರ್ಧೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ Shimoga Dasara ಬಾಳೆಹಣ್ಣು ತಿನ್ನುವ ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ಇಡ್ಲಿ, ಸಾಂಬಾರ್ ತಿನ್ನುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅ.10 ರಂದು ಬೆಳಗ್ಗೆ 10.30ಕ್ಕೆ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಆಹಾರ ತಯಾರಿಸುವ ಸ್ಪರ್ಧೆಯಲ್ಲಿ ಅಮ್ಮ ಮಗ ಸೇರಿ ಹೆಸರುಕಾಳು ಉಪಯೋಗಿಸಿ ಆರೋಗ್ಯಕರ ತಿನಿಸನ್ನು ತಯಾಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಆಹಾರ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ನೊಂದಣಿಗಾಗಿ ಮೊ.ಸಂ.: 9886033982/9902525752 ಗಳನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...