Navaratri Festival ಶಿವಮೊಗ್ಗ ನಗರದ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ 16ನೇ ನವರಾತ್ರಿ ಉತ್ಸವವನ್ನು ಅ.3ರಿಂದ 11ರವರೆಗೆ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನದ ಅರ್ಚಕ ಸಂದೇಶ್ ಉಪಾಧ್ಯ,
ನಗರದ ಏಕೈಕ ನಾಗಕ್ಷೇತ್ರವಾದ ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ 03 ರ, ಗುರುವಾರ ಸಂಜೆ 6ಕ್ಕೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆ, ವಿದುಷಿ ಪುಷ್ಪಾ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ದೇವಸ್ಥಾನದ ಅಧ್ಯಕ್ಷ ಹೆಚ್. ರಾಮಲಿಂಗಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಬಾರಿಯೂ ದೇವಿಯ 9ನೇ ಅವತಾರವಾದ ಚಾಮುಂಡ ದೇವಿಯ ರೂಪದಲ್ಲಿ ಕಂಗೊಳಿಸಲಿದ್ದಾಳೆ.
ಶಿವಮೊಗ್ಗ ಶಿಲ್ಪಿ ಪ್ರವೀಣ್ ಕವೇಟ್ಕರ್ ದೇವಿಯ ವಿಗ್ರಹವನ್ನು ನಿರ್ಮಿಸಿದ್ದಾರೆ ಎಂದರು.
ಪ್ರತಿದಿನ ಬೆಳಿಗ್ಗೆ 8.30 ರಿಂದ ಚಂಡಿಕಾಯಾಗ ಪ್ರಾರಂಭಗೊಂಡು ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು 5.00 ಘಂಟೆಯಿಂದ ಸ್ಥಳಿಯ ಭಜನಾ ಮಹಾಪೂರ್ಣಾಹುತಿಯೊಂದಿಗೆ ಮುಕ್ತಾಯಗೊಳ್ಳಲಿದೆ.
Navaratri Festival ಸಾಯಂಕಾಲ ಮಂಡಳಿಯಿಂದ ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಹಾಗೂ 5.30ರಿಂದ ನಗರ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಮತ್ತು 6.30ರಿಂದ ನಗರದ ಸುಪ್ರಸಿದ್ದ ಕಲಾವಿದರುಗಳಿಂದ ಭರತನಾಟ್ಯ, ಯಕ್ಷಗಾನ, ಸಂಗೀತ ಸೇವೆ, ಸುಗಮ ಸಂಗೀತ ಕಾರ್ಯಕ್ರಮ, ಭಾವಗೀತೆ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ರಾತ್ರಿ 8.30ಕ್ಕೆ ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ಇರುತ್ತದೆ ಎಂದು ವಿವರಿಸಿದರು.