Shikaripura News ಶಿಕಾರಿಪುರ ಪುರಸಭೆಯ ಮೀಟಿಂಗ್ ಹಾಲ್ ನಲ್ಲಿ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲಸದ ವೇಳೆ ಪೌರಕಾರ್ಮಿಕ ದಿನದ ನೆಪದಲ್ಲಿ ವಾದ್ಯಗೋಷ್ಠಿ ನಡೆಸಿ, ದಿನವಿಡೀ ಡಾನ್ಸ್ ಮಾಡಿ, ಕೂಗಾಡುತ್ತ್ತಾ ಮೋಜಿ, ಮಸ್ತಿ ಮಾಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ಗೆಳೆಯರ ಬಳಗ ಆಗ್ರಹಿಸಿದೆ.
ಶುಕ್ರವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳದ ರಾಜ್ಯಾಧ್ಯಕ್ಷ ಅನಿಲ್ ಕುಂಚಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಪುರಸಭೆ ಮುಖ್ಯಾಧಿಕಾರಿ ಭರತ್ ಇದಕ್ಕೆಲ್ಲ ಕಾರಣರಾಗಿದ್ದು, ಅವರನ್ನು ವಜಾ ಮಾಡಬೇಕು. ವಾಣಿಜ್ಯ ಮಳಿಗೆ ಹಂಚಿಕೆಯಲ್ಲೂ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಈಗ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ, ಪುರಸಭೆಯ ಡಾನ್ಸ್ ಹರಿದಾಡುತ್ತಿದ್ದು, ಈ ವಿಡಿಯೋಗಳನ್ನು ವೀಕ್ಷಿಸಿದ ಸಾರ್ವಜನಿಕರು ಪುರಸಭೆಯ ಕಾರ್ಯವೈಖರಿ ನೋಡಿ ಛೀಮಾರಿ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ, ಶಿಕಾಲಪುರ ಪುರಸಭೆಗೆ ಸೇರಿದ ವಾಣಿಜ್ಯ ಮಆರೆಗಳ ಹರಾಜು ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರದ ವಿಷಯವನ್ನು ಎಲ್ಲಾ ಸುದ್ದಿ ಮಾಧ್ಯಮಗಳು, ಪತ್ರಿಕೆಗಳು, ಟಿವಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಇದಾದ ನಾಲ್ಕು ದಿನಗಳಲ್ಲಿಯೇ ಮತ್ತೊಂದು ಕರ್ಮಕಾಂಡ ನೋಡುವಂತೆ ಪರಿಸ್ಥಿತಿ ಶಿಕಾರಿಪುರ ಜನತೆಗೆ ಬಂದಿದೆ ಎಂದರು.
ಪುರಸಭೆಯಲ್ಲಿ ಇ ಸ್ವತ್ತಿಗೆ ಅರ್ಜಿ ಹಾಕುವ ನಗರದ ನಾಗರಿಕರಿಗೆ ತೊಂದರೆ ಕೊಡಲಾಗುತ್ತಿದೆ. ಎಲ್ಲಾ ದಾಖಲೆ ಸರಿ ಇದ್ದರೂ ಕೂಡ ವರ್ಷಗಟ್ಟಲೆ ಪುರಸಭೆಗೆ ಅಲೆದಾಡುವಂತಾಗಿದೆ. ಸಂಬಂಧಿಸಿದ ಎಲ್ಲಾ ಕೇಸ್ ವರ್ಕರ್ಸ್‌ಗಳಿಂದ ತೊಂದರೆ ಅನುಭವಿಸಿ ಅವರು ಕೇಳಿದಷ್ಟು ಹಣ ಕೊಡುವ ಪರಿಸ್ಥಿತಿ ಬಂದಿದೆ. ನೂರಾರು ಸಮಸ್ಯೆಗಳ ಆಗರವಾಗಿರುವ ಪುರಸಭೆ ಕಾರ್ಯಾಲಯಕ್ಕೆ ಬರುವ ನಾಗರಿಕರನ್ನು ಹೀನಾಯವಾಗಿ ಕಾಣಲಾಗುತ್ತಿದೆ ಎಂದು ದೂರಿದರು.
Shikaripura News ಶಿಕಾಲಪುರ ಪುರಸಭೆಯ ಸಮಸ್ಯೆಗಳನ್ನು ಮತ್ತು ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಿ ಬಡವರ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಬಳಗದ ರಾಜ್ಯ ಉಪಾಧ್ಯಕ್ಷೆ ಬಿ. ಬಿ. ಆಯಿಷಾ, ಜಿಲ್ಲಾ ಅಧ್ಯಕ್ಷ ಪರಮೇಶ್ವರಪ್ಪ, ಯುವರಾಜ, ಜಯಂತಿ, ಇಮ್ತಿಯಾಜ್, ಹಾಶೀಮ್ ಸಾಬ್, ರವಿ, ವಿಜಯಕುಮಾರ್, ಪುಷ್ಪಾ ಮೊದಲಾದವರಿದ್ದರು.
Shikaripura News ಶಿಕಾರಿಪುರ ಪುರಸಭೆ ಮುಖ್ಯಾಧಿಕಾರಿ ವಜಾಕ್ಕೆ ಗೆಳೆಯರ ಬಳಗ ಆಗ್ರಹ
Date: