Shivaganga Yoga Centre ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಯ ಹಿರಿಮೆ ಹೆಚ್ಚಾಗುತ್ತದೆ ಎಂದು ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯ ಯೋಗ ಶಿಕ್ಷಕ ಜಿ.ಎಸ್.ಓಂಕಾರ್ ಅಭಿಪ್ರಾಯಪಟ್ಟರು.
ನಗರದ ಶುಭಂ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸಮಾಜದ ಬಗ್ಗೆ ಆಲೋಚನೆ ಮಾಡುವ ಜತೆಯಲ್ಲಿ ಸೇವಾ ಕಾರ್ಯಗಳನ್ನು ಮಾಡುವ ಅನೇಕ ನಮ್ಮ ನಡುವೆ ಇದ್ದಾರೆ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಕೂಡ ಎಂದು ತಿಳಿಸಿದರು.
Shivaganga Yoga Centre ಉಡುಪಿಯ ಕಿಮ್‌ಸ್ಟಾರ್ ಸಂಸ್ಥೆಯಿಂದ ಡಾ. ಪುನೀತ್ ರಾಜ್‌ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ ಪುರಸ್ಕೃತ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ವಿಜಯ್‌ಕುಮಾರ್ ಅವರಿಗೆ ಸನ್ಮಾನಿಸಲಾಯಿತು.
ಯೋಗ ಶಿಕ್ಷಕ ಎಚ್.ಕೆ.ಹರೀಶ್ ಮಾತನಾಡಿ, ರಕ್ತದಾನಿ ಆಗಿರುವ ವಿಜಯ್‌ಕುಮಾರ್ ಅವರು ತುರ್ತು ಸಂದರ್ಭಗಳಲ್ಲಿ ಅನೇಕ ಬಾರಿ ರಕ್ತದಾನ ಮಾಡಿದ್ದು, ರೋಟರಿ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ ಎಂದು ಹೇಳಿದರು.
ಯೋಗ ಶಿಕ್ಷಕ ನರಸೋಜಿರಾವ್ ಮಾತನಾಡಿ, ವಿಜಯಕುಮಾರ್ ಅವರು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ವಿವರ ಹಾಗೂ ಸೈಕಲ್ಲಿಂಗ್‌ನಲ್ಲಿ ಗಿನ್ನೆಸ್ ದಾಖಲೆ ಹಾಗೂ ಲಿಮ್ಕಾ ದಾಖಲೆ ಮಾಡಿರುತ್ತಾರೆ. ವಿಶೇಷ ಕಾರ್ಯಕ್ರಮಗಳಲ್ಲಿ ಸದಾ ತೊಡಗಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ದಂಪತಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಯೋಗ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಬಿಂದು ವಿಜಯಕುಮಾರ್, ಎಸ್.ಟಿ.ಆನಂದ್, ಸುಜಾತಾ ಮಧುಕೇಶ್ವರ, ಸುಮಾ, ಗಾಯತ್ರಿ, ಶೋಭಾ ಶಂಕರ್, ಉಷಾ, ಶೈಲಜಾ, ಚಂದ್ರಹಾಸ ಶೆಟ್ಟಿ, ಸೌಮ್ಯ, ಶಶಿಧರ್, ಚಂದ್ರಶೇಖರ, ರುದ್ರಪ್ಪ ಚೀಲೂರು, ಮಣಿ, ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
Shivaganga Yoga Centre ಸಾಧಕರನ್ನು ಗೌರವಿಸಿದಾಗ ಸಂಸ್ಥೆಯ ಹಿರಿಮೆ ವೃದ್ಧಿ
Date: