Tirupati laddu ತಿರುಪತಿ ಲಡ್ಡು ಪ್ರಸಾದ ಕುರಿತು ಏನೆಲ್ಲಾ ವ್ಯತಿರಿಕ್ತ ವರದಿಗಳು ಮಾಧ್ಯಮಗಳಲ್ಲಿ ಬಂದಿವೆ. ಪ್ರಾಣಿಜನ್ಯ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ.
ಅದು ಪ್ರಯೋಗಾಲಯದಲ್ಲಿ ಧೃಢಪಟ್ಟಿದೆ.ಆದರೂ ಕೂಡ ಶ್ರೀವೆಂಕಟೇಶ್ವರ ಸ್ವಾಮಿ ಲಡ್ಡು ಪ್ರಸಾದದ ಜನಪ್ರಿಯತೆ ಕುಗ್ಗಿಲ್ಲ.
ದಿನಂಪ್ರತಿ 60,000 ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ ಎಂದು ಟಿಟಿಡಿ ಹೇಳಿದೆ .
ಬಂದ ಭಕ್ತರು ಪ್ರಸಾದ ರೂಪ ಮತ್ತು, ವಿತರಣೆಗೆಂದು ಸಾಕಷ್ಟು ಲಡ್ಡುಗಳನ್ನು ಖರೀದಿ ಮಾಡುತ್ತಾರೆ. ಅದರಂತೆ ಸೆ.19ರಂದು 3.59 ಲಕ್ಷ ಲಡ್ಡು ಮಾರಾಟವಾಗಿವೆ. ಸೆ.20ರಂದು 3.17 ಲಕ್ಷ, ಸೆ.21ಕ್ಕೆ 3.67 ಲಕ್ಷ, ಸೆ.22ಕ್ಕೆ 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ.
Tirupati laddu ಪ್ರಸಾದದಲ್ಲಿ ದೋಷವಿದೆ ಎಂಬ ಸುದ್ದಿಯ ಮೊದಲು ದೇಗುಲದಲ್ಲಿ ಪ್ರತೀದಿನ ಸರಾಸರಿ 3.50 ಲಕ್ಷ ಲಡ್ಡು ಮಾರಾಟವಾಗುತ್ತಿತ್ತು. ಈಗಲೂ ಅದರ ಆಸುಪಾಸಿನ ಸಂಖ್ಯೆಯಲ್ಲೇ ಮಾರಾಟವಾಗುತ್ತಿದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.