Monday, November 25, 2024
Monday, November 25, 2024

Kannada Book Authority ದಸರಾ ಉತ್ಸವ-2024 ಕನ್ನಡ ಪುಸ್ತಕ ಮಾರಾಟ ಮೇಳ ದಲ್ಲಿ ಭಾಗವಹಿಸುವ ಆಸಕ್ತ ಮಾರಾಟಗಾರರಿಗೆ ಮಾಹಿತಿ

Date:

Kannada Book Authority ಜಗತ್ತಿನ ಪ್ರಸಿದ್ದ ಮೈಸೂರು ದಸರಾ ಉತ್ಸವ-2024ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಅ.03 ರಿಂದ ಅ.11 ರವರೆಗೆ “ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2024″ವನ್ನು ಸೌಟ್ಸ್ ಮತ್ತು ಗೈಡ್ಸ್ ಮೈದಾನ, ಹಳೆ ಡಿ.ಸಿ. ಕಚೇರಿ ಎದುರು, ಮೈಸೂರು ಇಲ್ಲಿ ಏರ್ಪಡಿಸಲಾಗುವುದು.
ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು / ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ.1000-00ಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು – ಅವರ ಹೆಸರಿನಲ್ಲಿ ಡಿಡಿಗಳನ್ನು ಸಲ್ಲಿಸುವುದು.
Kannada Book Authority ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರಿನ ಕಛೇರಿ ಅಥವಾ ಆಯಾ ಜಿಲ್ಲೆಯಲ್ಲಿರುವ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಗಳಲ್ಲಿ ಅಥವಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ https://kpp.karnataka.gov.in ನಲ್ಲಿ ಉಚಿತವಾಗಿ ಪಡೆದುಕೊಂಡು, ಭರ್ತಿಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಸೆ.30 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಅವರ ಹೆಸರಿಗೆ ಅಂಚೆಯ ಮೂಲಕ ಹಾಗೂ ಇ-ಮೇಲ್ kannadappradhikara@gmail.com ರ ಮೂಲಕ ಸಲ್ಲಿಸಲು ಕೋರಿದೆ. ನಿರ್ಮಿಸಲಾಗುವ 60 ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, -560002 :080-22484516/22107704/05 ನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga City Corporation ಶಿವಮೊಗ್ಗದಲ್ಲಿ ವಾಣಿಜ್ಯ ಸಂಕೀರ್ಣ & ಯೋಗ ಭವನ ‌ಲೋಕಾರ್ಪಣೆ

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದ ವಿನೋಬನಗರ...

MESCOM ನವೆಂಬರ್ 27. ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು

ಶಿವಮೊಗ್ಗ ನಗರದ ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ...

Rotary Shimoga ನಿರಂತರ ಪರಿಶ್ರಮ,ಶ್ರದ್ಧೆ, ಪ್ರಾಮಾಣಿಕತೆಯಿಂದ ಜೀವನದಲ್ಲಿ ಯಶ ಸಾಧ್ಯ- “ಅಮೃತ್ ನೋನಿ” ಡಾ.ಶ್ರೀನಿವಾಸ ಮೂರ್ತಿ

Rotary Shimoga ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಪ್ರಾಮಾಣಿಕತೆ ಹಾಗೂ...