Rotary Club Shivamogga ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆ ಅಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳು ರಕ್ಷಣೆಯಾಗುತ್ತದೆ ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷರಾದ ಡಾ. ಭರತ್ ತಿಳಿಸಿದರು.
ಶಿವಮೊಗ್ಗ ನಗರದ ಮೇಲಿನ ಅನಸವಾಡಿ ತುಂಗಾ ಪ್ರೌಢಶಾಲೆಯಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 32ನೇ ಶ್ರದ್ಧಾಂಜಲಿ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಶ್ರೀ ತರಳಬಾಳು ಫೌಂಡೇಶನ್ ಸಿರಿಗೆರೆ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಮತ್ತು ಡೆಂಟಲ್ ಇಂಡಿಯನ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ಚಿಕಿತ್ಸೆ, ಆರೋಗ್ಯ ತಪಾಸಣೆ, ಔಷಧ ವಿತರಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲ್ಲುಗಳ ಸ್ವಚ್ಚತೆ ಹಾಗೂ ಹಲ್ಲುಗಳ ರಕ್ಷಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡುವುದರ ಜೊತೆಗೆ ಸಮಾಜಕ್ಕೆ ಹಲವಾರು ಕೊಡುಗೆಯನ್ನು ಕೊಟ್ಟಿದೆ. ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುವ ವ್ಯವಸ್ಥೆ ರೋಟರಿ ಸಂಸ್ಥೆ ಎಂದು ತಿಳಿಸಿದರು.
ಈ ವೇಳೆ ಡಾ. ಸಾತ್ವಿಕ್ ಮಾತನಾಡಿ, ಆರೋಗ್ಯವೇ ಭಾಗ್ಯ. ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.
Rotary Club Shivamogga ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಧಾ ವೇದಮೂರ್ತಿ ಮಾತನಾಡಿ, ರೋಟರಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಹಾಗೆಯೇ ಸ್ಕೂಲ್ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಿದ್ದಕ್ಕೆ ರೋಟರಿ ಸೆಂಟ್ರಲ್ ಗೆ ಕೃತಜ್ಞತೆ ತಿಳಿಸಿದರು.
ಶಿಬಿರದ ಪ್ರಯೋಜನವನ್ನು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಡೆದುಕೊಂಡರು. ಕಾರ್ಯಕ್ರಮದ ಸಂಯೋಜಕರಗಿ ರಮೇಶ್.ಎನ್ ಸಂಯೋಜಿಸಿದ್ದರು. ಫ್ರಾಂಕ್ ಕೋ ಇಂಡಿಯಾ ಸಂಜಯ್ ಅವರು ಉಚಿತ ಔಷಧವನ್ನು ನೀಡಿದರು.
ಸಂತೋಷ್ ಮೆಡಿಕಲ್ ಅವರು ಉಚಿತ ಶುಗರ್ ಟೆಸ್ಟ್ ನೀಡಲ್ ಗಳನ್ನು ನೀಡಿದರು. ದಂತ ಚಿಕಿತ್ಸಾ ಉಸ್ತುವಾರಿಯನ್ನು ಸಂತೋಷ.ಬಿ.ಎ ಅವರು ವಹಿಸಿಕೊಂಡಿದ್ದರು. ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ಹಾಗೂ ಬ್ರಷ್ ಅನ್ನು ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಅವರು ನೀಡಿದರು. ಪಿಡಿಜೆ ಜಿ.ಎನ್.ಪ್ರಕಾಶ್ ಅವರು ರಕ್ತದಾನ ಶಿಬಿರದ ಮೊಬೈಲ್ ವ್ಯಾನ್ ಅನ್ನು ಆಯೋಜನೆ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್.ಜಿ, ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎಂ.ಬಸವರಾಜಪ್ಪ ಮತ್ತು ಶಾಲಾ ಸಂಯೋಜಕರಾದ ಚಂದ್ರಶೇಖರ್.ಎಂ.ಡಿ, ಕಾರ್ಯದರ್ಶಿ ಈಶ್ವರ್.ಬಿ.ವಿ, ರವಿ ಕೋಟೊಜಿ, ಧರ್ಮೇಂದ್ರ ಸಿಂಗ್, ಮಂಜುನಾಥ್ ಹೆಗಡೆ, ದೀಪಾ ಶೆಟ್ಟಿ, ಬಸವರಾಜ ಬಿ.ಎನ್, ಅಧ್ಯಕ್ಷರಾದ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್ ಉಪಸ್ಥಿತರಿದ್ದರು.