Mathura Paradise ಮಹಿಳೆಯರು ಇಷ್ಟವಿರುವ ಉದ್ಯಮ ಕ್ಷೇತ್ರದಲ್ಲಿ ನಿರಂತರ ಪರಿಶ್ರಮ ವಹಿಸಿ ಯಶಸ್ಸು ಸಾಧಿಸಬೇಕು ಎಂದು ವೈದ್ಯೆ ಡಾ. ಶುಭ್ರತಾ ಹೇಳಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ ನಗರದ ಮಥುರಾ ಪ್ಯಾರಡೈಸ್‌ನಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಆಯೋಜಿಸಿದ್ದ “ವೃತ್ತಿ ಪ್ರವೃತ್ತಿ ಹಾಗೂ ಜೀವನ ಸಮತೋಲನ”ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ದಿನನಿತ್ಯದ ಸಾಂಸಾರಿಕ ಜೀವನದಲ್ಲಿ ತನ್ನ ಗುರುತೇ ಕಳೆದುಹೋಗುವಂತೆ ಮಗ್ನಳಾಗಿದ್ದಾಳೆ. ಜೀವನ ಒಮ್ಮೆ ತಿರುಗಿ ನೋಡಿದಾಗ ಆಕೆಗೆ ಅದರ ಅರಿವಾಗುತ್ತದೆ. ಸಾಂಸಾರಿಕ ಜೀವನದ ಜೊತೆ ಜೊತೆಗೆ ನಿಮ್ಮ ವೃತ್ತಿ ಪ್ರವೃತ್ತಿಯಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಯಶಸ್ಸು ಸಾಧಿಸಬೇಕು. ನಿಮ್ಮ ವ್ಯಕ್ತಿತ್ವ ಗುರುತು ಕಳೆದು ಹೋಗದಂತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಉದ್ಯಮಿಯಾದ ಮಹಿಳೆ ತನ್ನ ಮನೆ, ವೃತ್ತಿ ಹಾಗೂ ಪ್ರವೃತ್ತಿ ಎಲ್ಲವನ್ನೂ ನಿಭಾಯಿಸಿಕೊಂಡು ಜೀವನದ ಸಮತೋಲನ ಕಾಯ್ದುಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದರು.
Mathura Paradise ನಮ್ಮ ಶಕ್ತಿಗಳ ದೌರ್ಬಲ್ಯಗಳ ಅರಿವು, ಭಾವನೆಗಳ ನಿರ್ವಹಣೆ, ಇತರರ ಬಗ್ಗೆ ಸಹಾನುಭೂತಿ, ಸೃಜನಾತ್ಮಕ ವಿಮರ್ಶಾತ್ಮಕ ಚಿಂತನೆಗಳ ಬೆಳವಣಿಗೆ, ಮನೆಯವರೊಡನೆ ವೃತ್ತಿಯಲ್ಲಿ ಸಮಾಜದಲ್ಲಿ ಪರಿಣಾಮಕಾರಿ ಸಂವಹನ, ಅಂತರ ವ್ಯಕ್ತಿಯ ಕೌಶಲ್ಯಗಳು ನೀಡುವ ಇಂತಹ ತರಬೇತಿಗಳು ಮಹಿಳಾ ಉದ್ಯಮಿಗಳನ್ನು ಉತ್ತಮ ಶಿಲ್ಪಗಳನ್ನಾಗಿ ರೂಪಿಸುತ್ತವೆ ಎಂದು ತಿಳಿಸಿದರು.
ಉಪನ್ಯಾಸಕಿ, ಸಂಪನ್ಮೂಲ ವ್ಯಕ್ತಿ ಪುಷ್ಪಲತ ಹೆಚ್ .ಎಸ್ ಮಾತನಾಡಿ, ಉದ್ಯಮದಲ್ಲಿ ಯಶಸ್ಸು ಸಾಧಿಸಲು ಆರೋಗ್ಯ ಹಾಗೂ ಸಮಯದ ಸಮರ್ಪಕ ನಿರ್ವಹಣೆ ಅತ್ಯಂತ ಮುಖ್ಯವಾಗಿದೆ. ಹೆಣ್ಣಿನ ಉತ್ತಮ ಆರೋಗ್ಯವು ಉತ್ಸಾಹ ಮತ್ತು ಕರ್ತವ್ಯ ನಿಷ್ಠೆಯ ಮೆಟ್ಟಿಲುಗಳು. ಸಮಯವನ್ನು ಪರಿಣಾಮಕಾರಿಯಾಗಿ ಬಳಸಿದಾಗ ಕೆಲಸಗಳಲ್ಲಿ ಸಮತೋಲನ ಮತ್ತು ಸೃಜನಶೀಲತೆ ಮೇಲೆ ಒತ್ತು ನೀಡಬಹುದು. ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಕಾರ್ಯದರ್ಶಿ ಶಿಲ್ಪ ಗೋಪಿನಾಥ್, ಖಜಾಂಚಿ ಸಹನಾ ಚೇತನ್, ತರಬೇತುದಾರ ಭಾರತಿ, ಕಿರಣ್ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲೆಯ ವಿವಿಧಡೆ ಗ್ರಾಮಾಂತರ ಪ್ರದೇಶದಿಂದ ಮಹಿಳಾ ಉದ್ಯಮಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು
Mathura Paradise ಕುಟುಂಬ ಜಿವನದ ಜೊತೆ ಮಹಿಳೆ ತನ್ನನ್ನು ವೃತ್ತಿ ಪ್ರವೃತ್ತಿಯಲ್ಲಿ ತೊಡಗಿ ಯಶ ಸಾಧಿಸಬೇಕು- ಡಾ.ಶುಭ್ರತಾ
Date: