B.Y. Raghavendra ಮಾಜಿ ಶಾಸಕ ಆಯನೂರು ಮಂಜುನಾಥ್ ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನಾನು ಯಾವುದೇ ದೇವರ ಸಮ್ಮುಖಕ್ಕೆ ಬಂದು ಯಾವ ಭ್ರಷ್ಠಾಚಾರ ನಡೆಸಿಲ್ಲ ಎಂದು ಹೇಳಲು ಸಿದ್ಧ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಕೆರೆ ಆಸ್ಪತ್ರೆಯ ಜಾಗದ ಬಗ್ಗೆ ಆರೋಪ ಮಾಡಿದ್ದಾರೆ. ಇಲ್ಲಿರುವುದು ರೈತನಿಗೂ ಕೆಐಡಿಬಿಗೂ ಸಂಪರ್ಕ ಮಾತ್ರ. ನನ್ನ ವ್ಯವಹಾರವಿಲ್ಲ. ಅವರು ಹೇಳಿದಂತೆ ಅದು ಕೆಐಎಡಿಬಿ ಲ್ಯಾಂಡ್ ಅಲ್ಲ ಅದು. ಕನ್ಸಲ್ಟ್ ಅವಾರ್ಡ್ ಆಗಿ ಸಿಂಗಲ್ ವಿಂಡೋದಲ್ಲಿ ದೊರೆತಿದೆ. ಆದರೆ ಮಿನಿ ಅದನ್ನು ಮೂಡಾ ಹಗರಣ ಎಂದು ಅವರು ಹೇಳಿದ್ದಾರೆ ಎಂದರು.
ಟೋಲ್ ಗೇಟ್ ಬಗ್ಗೆ ಹಿಂದಿನ ಸರಕಾರ ಆದೇಶ ಮಾಡಿದ್ದು ನಿಜ. ಆದರೆ ಸ್ಥಾಪನೆ ಆಗಿರಲಿಲ್ಲ. ನಾವೇ ಟೋಲ್ ಬೇಡ ಎಂದಿದ್ದೆವು. ಸರ್ಕಾರ ಬದಲಾದಂತೆ ಟೋಲ್ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಆದರೆ ಟೋಲ್ ಸ್ಥಾಪನೆಯಲ್ಲಿ ನಮ್ಮ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ಸಿಡ್ಬಿ ಶಾಖೆ ಶೀಘ್ರದಲ್ಲಿ :
B.Y. Raghavendra ನಗರದಲ್ಲಿ ಭಾರತೀಯ ಸಣ್ಣ ಕೈಗಾರಿಕಾ ಬ್ಯಾಂಕ್ (ಎಸ್‌ಐಡಿಬಿಐ- ಸಿಡ್ಬಿ) ಶಾಖೆ ಆರಂಭವಾಗುವ ಲಕ್ಷಣವಿದೆ. ಶಿವಮೊಗ್ಗಕ್ಕೆ ಸಿಡ್ಬಿ ಬ್ಯಾಂಕ್ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಸಂಸತ್ ಅಧಿವೇಶನದ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿದ್ದೆ. ಶಿವಮೊಗ್ಗಕ್ಕೆ ಸಣ್ಣ ಕೈಗಾರಿಕೆಗೆ ಅನುಕೂಲವಾಗುವ ಬ್ಯಾಂಕ್ ಶಾಖೆ ನೀಡುವಂತೆ ಕೋರಿದ್ದೆ. ಇದರ ಫಲವಾಗಿ ನಾಳೆ ಸೆಡ್ಬಿ ಬ್ಯಾಂಕ್ ಡಿಜಿಎಂ, ರೀಜಿನಲ್ ಆಫೀಸರ್ ಭೇಟಿ ನೀಡಲಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು
B.Y.Raghavendra ಭ್ರಷ್ಠಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾತಾಡಲಿ ಆಯನೂರುಗೆ ಸಂಸದ ರಾಘವೇಂದ್ರ ಸವಾಲ್
Date: