Gopala Krishna Beluru ಹೊಸನಗರ ಪಟ್ಟಣ ಪಂಚಾಯತಿ ಎರಡನೇ ಆಡಳಿತ ಅವಧಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ನಾಗಪ್ಪ(ರೆಡ್ಡಿ) ಹಾಗೂ ಉಪಾಧ್ಯಕ್ಷೆ ಯಾಗಿ ಅವಿರೋಧ ಆಯ್ಕೆ ಆಗಿದ್ದಾರೆ. ಒಟ್ಟು 11 ಸದಸ್ಯ ಬಲದ ಈ ಪಂಚಾಯತಿಯಲ್ಲಿ ತಲಾ ನಾಲ್ಕು ಬಿಜೆಪಿ, ಕಾಂಗ್ರೆಸ್ ಹಾಗು ಮೂರು ಬಿಜೆಪಿ ಚುನಾಯಿತ ಸದಸ್ಯರಿದ್ದರು. 29 ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಪಕ್ಷದ ಚುನಾಯಿತ ಸದಸ್ಯ ಹಾಲಗದ್ದೆ ಉಮೇಶ್, ಬಿಜೆಪಿಯ ಗುರುರಾಜ್ ಹಾಗು ಗುಲಾಬಿ ಮರಿಯಪ್ಪ ಗೈರು ಹಾಜರಾಗಿದ್ದು ಸಾರ್ವಜನಿಕರಲ್ಲಿ ಕುತೂಹಲ ಸೃಷ್ಟಿಸಿತ್ತು. ಶಾಸಕ ಬೇಳೂರು ಗೋಪಾಲಕೃಷ್ಣ ಕೃಷ್ಣ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಈ ಚುನಾವಣಾ ತಂತ್ರರೂಪಿಸಿ ತಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸುವಂತೆ ಕಾಯ್ದುಕೊಂಡರು. ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪರ ಐದು ಸದಸ್ಯರು ಹಾಗೂ ಬಿಜೆಪಿ ಪರ ಮೂರು ಸದಸ್ಯರು ಹಾಜರಿದ್ದರು. Gopala Krishna Beluru ಹಾಲಗದ್ದೆ ಉಮೇಶ್, ಗುಲಾಬಿ ಮರಿಯಪ್ಪ ಹಾಗೂ ಗುರುರಾಜ್ ಗೈರು ಹಾಜರು ಆಗುವ ಮೂಲಕ ಚುನಾವಣಾ ಪ್ರಕ್ರಿಯೆಯಿಂದ ದೂರವೇ ಉಳಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷೆಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಬೇಳೂರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಭದ್ರ ನೆಲೆ ಕಂಡಿದೆ. ಇತ್ತೀಚಿನ ಡಿಸಿಸಿ ಬ್ಯಾಂಕ್, ಶಿಮೊಲ್ ಹಾಗೂ ಕಾರ್ಗಲ್ ಪಟ್ಟಣ ಪಂಚಾಯತಿ ಚುನಾವಣೆಗಳೇ ಇದಕ್ಕೆ ಸಾಕ್ಷಿ ಎಂದರು. ಹೊಸನಗರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ತಾವು ಈಗಲೂ ಕಟಿಬದ್ದರಾಗಿದ್ದು ನೂತನ ಆಡಳಿತ ಸಮಿತಿ ಜೊತೆ ಚರ್ಚಿಸಿ ಪಟ್ಟಣ ಪಂಚಾಯತಿಯ ಸುಸಜ್ಜಿತ ನೂತನ ಕಟ್ಟಡ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಯಲ್ಲಿ ನೂತನ ಆಡಳಿತ ಸಮಿತಿಗೆ ನೈತಿಕ ಬೆಂಬಲ ನೀಡಲು ಸದಾಸಿದ್ದ ಇರುವುದಾಗಿ ತಿಳಿಸಿದರು. ಪರಸ್ಪರ ಹೊಂದಾಣಿಕೆ ರಾಜಕಾರಣದಿಂದ ಮಾತ್ರವೇ ಪಕ್ಷ ಸಂಘಟನೆ ಸಾಧ್ಯ ಎಂಬುದನ್ನು ಈ ಗೆಲುವು ಪುಷ್ಠಿಕರಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ತಿಳಿಸಿದರು
Gopala Krishna Beluru ಕಾಂಗ್ರೆಸ್ ಪಕ್ಷದ ವಶವಾದ ಹೊಸನಗರ ಪಟ್ಟಣ ಪಂಚಾಯತ್
Date: