Saturday, December 6, 2025
Saturday, December 6, 2025

Cosmo Club Shivamogga ರೋಟರಿ ಸೇವಾಕಾರ್ಯಗಳನ್ನ ಜನರಿಗೆ ಮುಟ್ಟಿಸುವುದು ನಮ್ಮ ಮೊದಲಕಾರ್ಯ- ರಾಜು ಸುಬ್ರಹ್ಮಣ್ಯ

Date:

Cosmo Club Shivamogga ಸಮಾಜಮುಖಿ ಕಾರ್ಯಕ್ರಮಗಳಿಂದ ರೋಟರಿ ಸಂಸ್ಥೆಯು ವಿಶ್ವಾದ್ಯಂತ ಜನಮಾನಸದಲ್ಲಿ ಸದಾ ಉಳಿದಿದೆ ಎಂದು ಅಂತರಾಷ್ಟ್ರೀಯ ರೋಟರಿ ಸಂಸ್ಥೆ ನಿರ್ದೆಶಕ ರಾಜು ಸುಬ್ರಮಣ್ಯ ಹೇಳಿದರು.
ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಉತ್ತರ ಸಂಸ್ಥೆ ಸಾರಥ್ಯದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ, ಪಬ್ಲಿಕ್ ಇಮೇಜ್, ಸದಸ್ವತ್ವ ಅಭಿವೃದ್ಧಿ ಸಮಾವೇಶ ಕುರಿತ ಎರಡು ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಚ್ಚು ಸದಸ್ಯರು ರೋಟರಿ ಸೇರುವುದರಿಂದ ಹೆಚ್ಚೆಚ್ಚು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಾವೆಲ್ಲರೂ ಮಾಡಲು ಸಾಧ್ಯ ಎಂದು ತಿಳಿಸಿದರು.
Cosmo Club Shivamogga ರೋಟರಿ ಸೇವಾ ಕಾರ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಮೊದಲ ಕಾರ್ಯವಾಗಬೇಕು. ಇದರಿಂದ ರೋಟರಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯ. ರೋಟರಿ ಸಂಸ್ಥೆಯ ಪ್ರಮುಖ ಸೇವೆಗಳಾದ ಪೋಲಿಯೋ ನಿರ್ಮೂಲನೆ, ಸಾಕ್ಷರತೆ, ನಿರಂತರ ಸಮಾಜಮುಖಿ ಸೇವಾ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದರು.
ಸೆಮಿನಾರ್ ಚೇರ್ಮನ್ ಶ್ರೀನಾಥ್ ಗಿರಿಮಾಜಿ ಸ್ವಾಗತಿಸಿ ಮಾಹಿತಿ ನೀಡಿದರು. ಜಿಲ್ಲಾ ಮಾಜಿ ಗವರ್ನರ್ ರಾಜಾರಾಮ್ ಭಟ್ ಸಮಾರಂಭದ ಉದ್ದೇಶದ ಕುರಿತು ಮಾತನಾಡಿದರು. ಜಿಲ್ಲಾ ಮಾಜಿ ಗವರ್ನರ್ ದೀಪಕ್ ಪುರೋಹಿತ್ ರೋಟರಿಯಲ್ಲಿ ಸದಸ್ಯರ ಪಾತ್ರ ಕುರಿತು ಮಾತನಾಡಿದರು. ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಅವರಿಗೆ ಅಭಿನಂದಿಸಲಾಯಿತು.
ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್, ಜಿಲ್ಲಾ ಮಾಜಿ ಗವರ್ನರ್ ಡಾ. ಗೌರಿ, ನಿಕಟಪೂರ್ವ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಜ್ಞಾನ ವಸಂತ, ರವೀಂದ್ರನಾಥ ಐತಾಳ್, ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ರೋಟರಿ ಉತ್ತರ ಅಧ್ಯಕ್ಷ ಸುಂದರ್, ಜಿಲ್ಲಾ ಕಾರ್ಯದರ್ಶಿ ರಾಮದೇವ ಕಾರಂತ್ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...