Kolkata Doctor Case ಕೋಲ್ಕತ್ತದ ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯುವ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಜೊತೆಯಲ್ಲಿಯೇ ಸಾಗರ ದಲ್ಲಿಯೂ ವೈದ್ಯಕೀಯ ಪ್ಯಾರಮೆಡಿಕಲ್ ವಿದ್ಯಾರ್ಥಿ ಸಮೂಹ ಎಬಿವಿಪಿ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಿದರು.
ಸಾಗರ ನಗರಸಭೆ ಪಕ್ಕದ ಗಾಂಧಿ ಮೈದಾನದಿಂದ ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆ ಮತ್ತು ಜ್ಞಾನಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಆರಂಬಿಸಿ ಸಾಗರದ ಹೃದಯ ಭಾಗ ಸಾಗರ್ ಹೊಟೇಲ್ ವೃತ್ತದಲ್ಲಿ ವಿದ್ಯಾರ್ಥಿ ಸಮೂಹ ಭಾರತ ನಕ್ಷೆಯ ಮಾದರಿಯಲ್ಲಿ ಸಾಲು ನಿಲ್ಲುವ ಮೂಲಕ ಪ್ರತಿಭಟನೆಯ ಮೂಲಕ ದೇಶದ ಗಮನ ಸೆಳೆಯುತ್ತಿದ್ದೇವೆ ಎಂಬ ಸಂದೇಶ ಮುಟ್ಟಿಸುವಂತಿತ್ತು.
ಯುವ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿರುದ್ಧ ಮಾತ್ರವಲ್ಲದೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಆಡಳಿತದತ್ತ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
Kolkata Doctor Case ಯುವ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕೇವಲ ವೈದ್ಯಕೀಯ ಸಮೂಹ ಬೆಚ್ಚಿ ಬೀಳುವಂತೆ ಮಾಡಿಲ್ಲ, ಬದ ಲಾಗಿ ದೇಶವೇ ಹೋರಾಟಕ್ಕೆ ಒಂದಾಗುವಂತೆ ಮಾಡಿದೆ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರು ಪ್ರಕರಣ ವನ್ನು ನಿರ್ವಹಿಸಿದ ರೀತಿಯೇ ಟೀಕೆಗೆ ಕಾರಣವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.