Rotary Organization Shivamogga ಬಯೋ ಡೈವರ್ಸಿಟಿ ಪಾರ್ಕ್ ತುಂಬಾ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 10,000 ಗಳಿಗಿಂತ ಹೆಚ್ಚು ಗಿಡಮರಗಳನ್ನು ಪೋಷಣೆ ಮಾಡುತ್ತಿರುವ ರೋಟರಿ ಸಂಸ್ಥೆಯ ಕಾರ್ಯಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಎಲ್‍ಐಸಿ ಸಂಸ್ಥೆಯ ಸಮಾಜಮುಖಿ ಕೆಲಸಗಳಿಗೆ ರೋಟರಿ ಸಂಸ್ಥೆಯೊಂದಿಗೆ ಇರುತ್ತೇವೆ ಎಂದು ಎಲ್‍ಐಸಿ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಶ್ರೀನಿವಾಸ್ ಅಭಿಮತ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ರೋಟರಿ ಸಂಸ್ಥೆಯ ಪ್ರಾಜೆಕ್ಟ್ ಆದ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ಸುಮಾರು 500 ಗಿಡಗಳ ಸಸಿಗಳನ್ನು ನೆಡುವುದರ ಮೂಲಕ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಹಾಗೂ ಶಿವಮೊಗ್ಗ ನಗರದ ಎಲ್‍ಐಸಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವನಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೋಟರಿ ಸಂಸ್ಥೆಯೊಂದಿಗೆ ಈ ದಿನ ಎಲ್‍ಐಸಿ ಯ ಜೊತೆಗೂಡಿ ವನಮೋತ್ಸವ ಮಾಡುತ್ತಿರುವುದು ಬಹಳ ಸಂತೋಷವಾದ ವಿಚಾರವಾಗಿದೆ. ಇಂತಹ ಸಮಾಜಮುಖಿ ಕೆಲಸಗಳಲ್ಲಿ ಯಾವಗಲೂ ನಿಮ್ಮ ಜೊತೆಗೂಡಿರುತ್ತೇವೆ ಎಂದರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್‍ನ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಸಸಿಗಳು ನೆಡುವುದು ಅμÉ್ಟೀ ಅಲ್ಲ ಅದನ್ನು ನೋಡಿ ಘೋಷಣೆ ಮಾಡುವುದು ಬಹಳ ಮುಖ್ಯವಾದ ಕೆಲಸ. ಆ ನಿಟ್ಟಿನಲ್ಲಿ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನೋಡಿಕೊಳ್ಳುತ್ತಿರುವ ಉಮೇಶ್ ರವರ ಶ್ರಮ ಶ್ಲಾಘನೀಯವಾಗಿದೆ ಎಂದ ಅವರು, ನಾವೆಲ್ಲ ರೋಟರಿ ಸದಸ್ಯರು ಸದಾ ತಮ್ಮ ಜೊತೆ ಇರುತ್ತವೆ ಎಂದು ತಿಳಿಸಿದರು.
Rotary Organization Shivamogga ಇದೇ ಸಂದರ್ಭದಲ್ಲಿ ಸದಸ್ಯರಾದ ಗಿರೀಶ್ ಅವರು 5,000 ಗಳನ್ನು ಬಯೋ ಡೈವರ್ಸಿಟಿ ಪಾರ್ಕ್ ಗೆ ಧೇಣಿಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಬಯೋಡೈವರ್ಸಿಟಿ ಪಾರ್ಕಿನ ಉಪಾಧ್ಯಕ್ಷ ಪಿಡಿಜಿ ಪ್ರಕಾಶ್, ಕಾರ್ಯದರ್ಶಿ ಈಶ್ವರ್, ಜೈಶೀಲ್ ಶೆಟ್ಟಿ, ಬಸವರಾಜ್, ಮಂಜುನಾಥ್ ಹೆಗಡೆ, ಗುರುರಾಜ್, ಜಗದೀಶ್, ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ಆನ್ಸ್ ಕ್ಲಬ್‍ನ ಅಧ್ಯಕ್ಷರಾದ ಗೀತಾ ಜಗದೀಶ್, ಎಲ್‍ಐಸಿ ಸಂಸ್ಥೆಯ ಗಣೇಶ್ ಭಟ್, ಆನಂದ್, ಇತರೆ ಸಿಬ್ಬಂದಿ ವರ್ಗದವರು ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.