Saturday, December 6, 2025
Saturday, December 6, 2025

Brahma Kumaris Institute ನಗರದ ಬ್ರಹ್ಮ ಕುಮಾರಿ ಸಂಸ್ಥೆಯಲ್ಲಿ ರಾಖಿ ಹಬ್ಬ ಆಚರಣೆ

Date:

Brahma Kumaris Institute ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ ರಾಖಿ ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು. ರಕ್ಷಾಬಂಧನ ಸಂದರ್ಭದಲ್ಲಿ ನಾವೆಲ್ಲರೂ ಪರಸ್ಪರ ಸೋದರ-ಸೋದರಿಯರು ಎಂಬ ಪವಿತ್ರ ದೃಷ್ಟಿಯ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಹಾಗೂ ಎಲ್ಲರಿಗೂ ಶ್ರೀರಕ್ಷೆಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪನರು,ಮಾಜಿ ಉಪಮುಖ್ಯ ಮಂತ್ರಿಗಳು, ಶಿವಮೊಗ್ಗ ಇವರು ಮಾತನಾಡುತ್ತಾ“ ಇಡೀ ವಿಶ್ವವನ್ನೇ ಒಂದುಗೂಡಿಸುವ ಸಂಸ್ಥೆಯೆಂದರೆ ಅದು ಈಶ್ವರೀಯ ವಿಶ್ವ ವಿದ್ಯಾಲಯ , ಇಲ್ಲಿ ಯಾವುದೇ ಜಾತಿ-ಧರ್ಮದ ಭೇದ-ಭಾವವಿಲ್ಲ ಎಂದರು.

Brahma Kumaris Institute ಮುಂದುವರೆದು ಮಾತನಾಡುತ್ತಾ ಪ್ರಸ್ತುತ ರಾಖಿಯ ಪಾವಿತ್ರತೆಯು ಜಗತ್ತಿನ ಮೃಗೀಯ ಮನಸ್ಕರಿಗೆ ಬೇಕಾಗಿದೆ. ನಾವು ಪರಸ್ಪರ ಅಣ್ಣ-ತಂಗಿಯರು,ಅಕ್ಕ-ತಮ್ಮಂದಿರು ಎಂಬ ಭಾವನೆಯಿಂದ ಸೋದರಿಯರ ರಕ್ಷಣೆಯಾಗಬೇಕು.ಅನಾಚರ-ಅತ್ಯಾಚಾರಗಳು ನಿಲ್ಲಬೇಕು “ ಎಂದು ರಾಖಿಯ ಮಹತ್ವವನ್ನು ತಿಳಿಸಿದರು. ನಂತರ ಶ್ರೀ ಈಶ್ವರಪ್ಪ ಹಾಗೂ ಶ್ರೀ ಕೆ ಈ ಕಾಂತೇಶ್ ಇವರಿಗೆ ಬ್ರಹ್ಮಾಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ಬಿಕೆ ಅನಸೂಯಕ್ಕನವರು ರಾಖಿ ಕಟ್ಟಿ ಸನ್ಮಾನಿಸಿದರು. ಬಿಕೆ ಶಿವದೇವಿ , ಬಿಕೆ ನಾಗರಾಜ್ ,ಬಿಕೆ ಮಂಜಪ್ಪ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

[2] ಮಾನ್ಯ ಶ್ರೀ ಚೆನ್ನಬಸಪ್ಪ , ಶಾಸಕರು,ಶಿವಮೊಗ್ಗ ಹಾಗೂ ಮಾನ್ಯ ಶ್ರೀ ಡಿ ಎಸ್ ಅರುಣ್ , ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ -ಇವರಿಗೆ ಬ್ರಹ್ಮಾಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ಬಿಕೆ ಅನಸೂಯಕ್ಕನವರು ರಕ್ಷಾಬಂಧನ ಕಟ್ಟಿ ಶುಭಹಾರೈಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...