Independence Day ದೇಶದ ಪ್ರತಿ ಪ್ರಜೆಯೂ ತಮ್ಮ ಚಿಂತನೆ, ನಿರ್ಧಾರ ಹಾಗೂ ಕಾರ್ಯಗಳನ್ನು ವೈಯಕ್ತಿಕ ಹಿತಕ್ಕೆ ಸೀಮಿತ ಮಾಡದೆ ರಾಷ್ಟ್ರ ಹಿತ ದತ್ತ ಮುಖ ಮಾಡುವುದೇ ಸ್ವಾತಂತ್ರ್ಯ ದಿನಾಚರಣೆಯಾಗಬೇಕು ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಆಶಯ ವ್ಯಕ್ತಪಡಿಸಿದರು. ದಾವಣಗೆರೆ ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ಭಾರತದ 78ನೇ ಸ್ವಾತಂತ್ರೋತ್ಸವದ ಆಚರಣೆಯ ಮುಖ್ಯ ಅತಿಥಿಗಳಾಗಿ ಧ್ವಜಾರೋಹಣ ನೆರವೇರಿಸಿ ಶಾಲಾ ಮಕ್ಕಳ ಕವಾಯತಿನ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಾ ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಲಕ್ಷಾಂತರ ಹೋರಾಟಗಾರರು ರಾಷ್ಟ್ರ ಕ್ಕಾಗಿ ತಮ್ಮ ಬಲಿದಾನ ಮಾಡಿದರೆ ವಿನಹ ದುಷ್ಟ ಆಡಳಿತದ ಬ್ರಿಟಿಷರನ್ನು ಬಲಿಪಡೆಯಲಿಲ್ಲ. ಅನೇಕ ಬಾರಿ ಪರಕೀಯರ ದಬ್ಬಾಳಿಕೆ ಹಾಗೂ ಆಡಳಿತಕ್ಕೆ ಒಳಪಟ್ಟರೂ independence-day ನಮ್ಮ ಭಾರತ ತನ್ನ ತಾಳುವ ಹಾಗೂ ಬಾಳುವ ಸುಸಾಮರ್ಥ್ಯದಿಂದ ತನ್ನ ಅಮೂಲ್ಯ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಇಂತಹ ಭಾರತ ವಿಶ್ವನಾಯಕತ್ವ ವಹಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದನ್ನು ವಿಶ್ವದ ಬೇರೆ ದೇಶಗಳು ತಿಳಿದಿವೆ, ಇದಕ್ಕಾಗಿ ನಮ್ಮ ಶಾಲಾ ಮಕ್ಕಳಿಗೆ ಶಿಕ್ಷಣ ಹಂತದಲ್ಲೇ ಒಳ್ಳೆಯ ನಾಯಕತ್ವದ ಗುಣಲಕ್ಷಣಗಳನ್ನು ಹೇಳಿಕೊಡಬೇಕಾಗಿದೆ ಎಂದರು. ಶಾಲಾ ಪ್ರಾಂಶುಪಾಲ ಸೈಯದ್ ಅರೀಫ್ ಆರ್ ಅಧ್ಯಕ್ಷೀಯ ನುಡಿಗಳನ್ನಾಡಿ ಪಾರಂಪರಿಕ ಹಬ್ಬ ಹರಿದಿನಗಳಲ್ಲಿ ತೋರುವ ಆಸಕ್ತಿಯನ್ನು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವಗಳಲ್ಲೂ ವಿದ್ಯಾರ್ಥಿಗಳು ತೋರಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಟಿ ಎಂ ಗಿರೀಶ್ ಹಾಗೂ ಅಧ್ಯಾಪಕ ವರ್ಗದ ಪ್ರೀತಾ ಟಿ ರೈ, ನೇತ್ರಾವತಿ ಎಸ್ಎಂ, ರೂಪ ಎಂ ಎಸ್ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ರಾಷ್ಟ್ರಭಕ್ತಿ ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ರೂಪಕಗಳನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿದರು. ಮಹಾಲಕ್ಷ್ಮಿ ಬಿ, ಉಮ್ಮೇ ಸಲ್ಮಾ, ಶಾಂತಲಾ ಎನ್ ಪಿ ನಿರೂಪಿಸಿದರೆ ದೇಶಭಕ್ತಿ ಗೀತೆಯನ್ನು ಖುಶಿ ಮತ್ತು ತಂಡದವರು ಹಾಡಿದರು. ಶ್ರೈನ್ ಬ್ಯಾಸಿಲಿಕ ಸ್ವಾಗತ ಕೋರಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಜಿ ಆರ್ ಉಷಾ ಮಾಡಿದರು. ತಸ್ಲಿಮಾ ನಝ್ನೀನ್ ವಂದನೆ ಸಮರ್ಪಿಸಿದರು.
Independence Day ವೈಯಕ್ತಿಕ ಹಿತಕ್ಕೆ ಸೀಮಿತವಾಗದೇ ರಾಷ್ಟ್ರಹಿತದತ್ತ ಮುಖ ಮಾಡುವುದೇ ಸ್ವಾತಂತ್ರ್ಯ ದಿನಾಚರಣೆ- ಡಾ.ಎಚ್.ಬಿ.ಮಂಜುನಾಥ್
Date: