Tungabhadra Dam
ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಿಂಕ್ ಚೈನ್ ತುಂಡಾಗಿರುವುದರಿಂದ, 19ನೇ ಕ್ರಸ್ಟ್ ಗೇಟ್ ಕಿತ್ತುಹೋಗಿರುವುದು ಮನಸ್ಸಿಗೆ ನೋವುಂಟು ಮಾಡಿದೆ.
ಅನ್ನದಾತರ ನೋವನಲ್ಲಿ ಭಾಗಿಯಾಗಿ, ಅವರೆಲ್ಲರ ಪರವಾಗಿ, ದುರಸ್ಥಿ ಕಾರ್ಯವನ್ನು ಬೇಗನೆ ಮುಗಿಸಿ, ಅವರೆಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಲು ಹಗಲು ರಾತ್ರಿ ಪ್ರಯತ್ನಿಸುವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ.
Tungabhadra Dam ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಪ್ರಕರಣ ಸಂಬಂಧಿಸಿದಂತೆ ಜಲಾಶಯ ಕ್ಕೆ ಬೇಟಿ ನೀಡಿದೆನು.
ಡ್ಯಾಂ ಗೆ ಬಂದು ವೀಕ್ಷಣೆ ಮಾಡಿದ್ದು, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.
ಸದ್ಯದ ಮಟ್ಟಿಗೆ 60 ರಿಂದ 65 ಟಿಎಂಸಿ ಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ, 20 ಪೀಟ್ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಗೊತ್ತಾಗಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ.