Belur Gopalakrishna ಬಿಜೆಪಿ ಮತ್ತವರ ಮೈತ್ರಿ ಪಕ್ಷದ ನಾಯಕರಿಗೆ ತಾಕತ್ತು ಮತ್ತು ದಮ್ಮಿದ್ದರೆ ಕಾಂಗ್ರೆಸ್ ಸರಕಾರ ಬೀಳಿಸಲಿ ಎಂದು ಶಾಸಕರು ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಸವಾಲೆಸೆದಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಸರಿಯಾಗಿ ನಡೆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೈಲಲ್ಲಿರಬೇಕಾಗುತ್ತದೆ. ಚೆಕ್‌ನಲ್ಲಿ ಲಂಚ ಪಡೆದ ದಾಖಲೆ ಇವರ ಹೆಸರಿಗಿದೆ. ಭ್ರಷ್ಟಾಚಾರದ ರೂವಾರಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಜನರಿಗೆ ಈ ಮೈತ್ರಿ ನಾಯಕರ ನಾಟಕ ಗೊತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಚ್ಛ ಆಡಳಿತ ನಡೆಸುತ್ತಿದ್ದಾರೆ.
ಇದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲದ ಆರೋಪ ಮಾಡಿದ್ದಾರೆ. ರಾಜ್ಯ ಪಾಲರು ಸತ್ಯದ ಪರ ಇರಬೇಕು. ರಾಜಭವನವನ್ನು ಬಿಜೆಪಿ ಕಚೇರಿ ಮಾಡಿಕೊಂಡರೆ ಈ ರೀತಿಯ ಪ್ರಕರಣಗಳಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿನ ಅಕ್ರಮ ನೇಮಕಾತಿಗಳಲ್ಲಿ ಯಡಿಯೂರಪ್ಪರ ಪುತ್ರ ರಾಘವೇಂದ್ರರ ಕೈವಾಡವಿದೆ. ಪ್ರಕರಣ ತನಿಖೆಯಾಗಬೇಕೆಂದು ಈಗಾಗಲೇ ಪತ್ರ ಅರ್ಜಿ ಕೊಟ್ಟಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವರುಗಳು ಮಾಡಿರುವ ಅಕ್ರಮಗಳ ತನಿಖೆ ಆಗುತ್ತದೆ.
ಮಾಚೇನಹಳ್ಳಿಯಲ್ಲಿ ಕೈಗಾರಿಕೋದ್ಯಮಿಗಳಿಗೆ ಅಗ್ಗದ ದರದಲ್ಲಿ ಭೂಮಿ ನೀಡಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಬೇಳೂರು ಹೇಳಿದರು.
Belur Gopalakrishna ವಿರೋಧಿಗಳ ಪಿತೂರಿ:
ಕೆಪಿಟಿಸಿಎಲ್ ಎಂಜಿನೀಯರ್ ಶಾಂತಕುಮಾರ್ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ನಾನು ಅವರ ಹಿಂದೆ ನನ್ನ ರಾಜಕೀಯ ವಿರೋಧಿಗಳಿರುವ ಅನುಮಾನ ಇದೆ. ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವಿಡಿಯೊ ತುಣಕನ್ನು ಮಾಜಿ ಶಾಸಕರು ಎಲ್ಲರಿಗೂ ಕಳಿಸುತ್ತಿದ್ದಾರೆ. ಪರಿಷತ್ ಸದಸ್ಯ ಸಿ.ಟಿ.ರವಿ ನನ್ನ ರಾಜೀನಾಮೆ ಕೇಳಿದ್ದಾರೆ. ಮಂತ್ರಿಯಾದವರು ರವಿ ಈ ರೀತಿ ಹಗುರವಾಗಿ ಮಾತನಾಡಬಾರದು ಎಂದರು.