Central Military Commission 2024-25ನೇ ಶೈಕ್ಷಣಿಕ ಸಾಲಿನಲ್ಲಿ ಮಾಜಿ ಸೈನಿಕರು, ಮಾಜಿ ಸೈನಿಕ ಅವಲಂಬಿತರ ಮಕ್ಕಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವ್ಯಾಸಂಗ ಮಾಡಲು ಕೇಂದ್ರೀಯ ಸೈನಿಕ ಮಂಡಳಿಯಿಂದ ಡಿಫೆನ್ಸ್ ಕೋಟಾದಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಜುಲೈ 20 ರವರೆಗೆ ನಿಗದಿಪಡಿಸಲಾಗಿದ್ದ ಅರ್ಜಿ ಅವಧಿಯನ್ನು ಆಗಸ್ಟ್ 11 ರವರೆಗೆ ವಿಸ್ತರಿಸಲಾಗಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೀಟು ಹಂಚಿಕೆಯ ಮೇರೆಗೆ, ಕೇಂದ್ರೀಯ ಸೈನಿಕ ಮಂಡಳಿಯಿಂದ ಡಿಫೆನ್ಸ್ ಕೋಟಾದಡಿಯಲ್ಲಿ ಆದ್ಯತೆಯ ಮೇರೆಗೆ ಸೀಟು ಹಂಚಿಕೆ ಲಭ್ಯವಿದ್ದು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ಎನ್‌ಇಇಟಿ) ಯಲ್ಲಿ ಅರ್ಹತೆಯನ್ನು ಪಡೆದಿರುವ ವಿದ್ಯಾರ್ಥಿಗಳು ಕೇಂದ್ರೀಯ ಸೈನಿಕ ಮಂಡಳಿ ಜಾಲತಾಣದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಪಡೆದ ದೃಢೀಕೃತ ಅರ್ಹತಾ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು 2024 ರ ಜುಲೈ 09 ರೊಳಗಾಗಿ ಸಲ್ಲಿಸಲು ಅವಧಿ ನಿಗದಿಪಡಿಸಲಾಗಿತ್ತು.
ಇದೀಗ ಈ ಸಮಯವನ್ನು
ಆಗಸ್ಟ್ 11 ರವರೆಗೆ ವಿಸ್ತರಿಸಲಾಗಿದೆ.
ವಿವರವಾದ ಮಾಹಿತಿಯನ್ನು ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣ “ONLINE.KSB.GOV.IN” ದಲ್ಲಿ ಪಡೆಯಬಹುದಾಗಿದೆ.
Central Military Commission ಹಾಗೂ ಹೆಚ್ಚಿನ ಮಾಹಿತಿಗಾಗಿ
ಉಪ ನಿರ್ದೇಶಕರ ಕಛೇರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರ ದೂರವಾಣಿ ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.