Wednesday, October 2, 2024
Wednesday, October 2, 2024

Scouts and Guides ಉತ್ತಮ ನಾಗರೀಕರಾಗಲು ಸ್ಕೌಟ್ ಸಹಕಾರಿ- ಡಾ.ಎಚ್.ಬಿ.ಮಂಜುನಾಥ್

Date:

Scouts and Guides ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಲಿರುವ ಭಾರತವು ದೊಡ್ಡ ಮೊತ್ತದ ಯುವಶಕ್ತಿಯನ್ನೂ ಹೊಂದಿದ್ದು ಭವಿಷ್ಯದ ಯುವಶಕ್ತಿಯಾಗಲಿರುವ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ನಾಗರೀಕರಾಗಬಹುದೆಂದು ದಾವಣಗೆರೆ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಉಪಾಧ್ಯಕ್ಷ, ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು. ಅವರಿಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇದರ ದಾವಣಗೆರೆ ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶಾಲಾ ಪರೀಕ್ಷೆಯನ್ನು ಎದುರಿಸಲು ಪಠ್ಯ ಶಿಕ್ಷಣವು ಅನುಕೂಲವಾದರೆ ಜೀವನ ಪರೀಕ್ಷೆಯನ್ನು ಎದುರಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿದ್ದು ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳು ಇದಕ್ಕೆ ಪೂರಕವಾಗಿವೆ, 1907ರಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ರಾಬರ್ಟ್ ಸ್ಟೀವನ್ ಸನ್ ಬೇಡೆನ್ ಪೊವೆಲ್ ರವರು ಹುಟ್ಟು ಹಾಕಿದ ಸ್ಕೌಟ್ಸ್ ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾಗಿದ್ದು ಈಗ ಪ್ರಪಂಚದ 216 ದೇಶಗಳಲ್ಲಿ ಸುಮಾರು ಆರು ಕೋಟಿ ಯಷ್ಟು ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು ಹೊಂದಿದೆ. ಭಾರತ ದೇಶದಲ್ಲೂ 1909 ನೇ ಇಸ್ವಿಯಲ್ಲಿ ಮೊಟ್ಟಮೊದಲ ಸ್ಕೌಟ್ ಘಟಕ ಕರ್ನಾಟಕದ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಟಿ ಹೆಚ್ ಬೇಕರ್ ರಿಂದ ಆರಂಭವಾಗಿದ್ದು ಪ್ರಸ್ತುತ ನಮ್ಮ ದೇಶದಲ್ಲಿ 40 ಲಕ್ಷ ಸ್ಕೌಟ್ ಗಳು,16 ಲಕ್ಷ ಗೈಡ್ ಗಳು ಇದ್ದಾರೆ. ದಾವಣಗೆರೆಯಲ್ಲಿ 1928 ನೇ ಇಸವಿಯಲ್ಲಿ ಆರಂಭವಾದ ಸ್ಥಳೀಯ ಸ್ಕೌಟ್ ಸಂಸ್ಥೆ ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ, Scouts and Guides ಕೊಂಡಜ್ಜಿ ಬಸಪ್ಪ, ಚಿಗಟೇರಿ ಜಯಣ್ಣ,ಶಿವಶಂಕರ್, ಶಿಕ್ಷಕರಾಗಿದ್ದ ಅ ರಾ ಶಂಕರಯ್ಯ ಮುಂತಾದ ಅನೇಕ ಮಹನೀಯರ ಪ್ರೋತ್ಸಾಹದಿಂದಾಗಿ ಬೆಳೆದು ಬಂದ ಇತಿಹಾಸವನ್ನು ಡಾ.ಎಚ್ ಬಿ ಮಂಜುನಾಥ ಸ್ವಾರಸ್ಯಕರವಾಗಿ ಹೇಳಿದರು. ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿದ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರವರು ಮಾತನಾಡಿ ಶಾಲಾ ಜೀವನದಲ್ಲಿನ ಪಠ್ಯೇತರ ಚಟುವಟಿಕೆಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ, ಮಕ್ಕಳು ಒಳ್ಳೆಯ ಕನಸುಗಳನ್ನು ಕಾಣಬೇಕು, ಅದರ ನನಸಿಗಾಗಿ ಕ್ರಿಯಾಶೀಲರಾಗಬೇಕು ಎಂದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಆರ್ ಡಿ ಬದರಿನಾಥ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ಸ್ವಾಗತ ಕೋರಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ ಕೊಟ್ರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್ ಜಿ ಕರಿಸಿದ್ದಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಜಿಲ್ಲಾಸ್ಕೌಟ್ ಆಯುಕ್ತ ಎ ಪಿ ಷಡಾಕ್ಷರಪ್ಪ, ಜಿಲ್ಲಾ ಗೈಡ್ ಆಯುಕ್ತೆ ಶಾರದಾ ಮಾಗನಹಳ್ಳಿ, ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಡಿ ಹಾಲಪ್ಪ, ಜಿಲ್ಲಾ ಕಾರ್ಯದರ್ಶಿ ಎಂ ರತ್ನ, ಜಿಲ್ಲಾ ತರಬೇತಿ ಆಯುಕ್ತೆ ಆರ್ ತುಳಸಾಮಣಿ, ಸಹಕಾರ್ಯದರ್ಶಿ ಆರ್ ಸುಖವಾಣಿ, ಸ್ಕೌಟ್ ಗೈಡ್ ಸ್ವಯಂಸೇವಕಿ ಅಶ್ವಿನಿ ಜೆ, ಮಹಮ್ಮದ್ ಹುಸೈನ್,ಹೆಚ್ಚುವರಿ ಜಿಲ್ಲಾ ಅಯುಕ್ತರುಗಳಾದ ಎಂ ಅಶೋಕ್ ಕುಮಾರ್, ಎಸ್ ಶಂಕರ್ ನಾಯಕ್, ನೂರುಲ್ಲಾ, ಎನ್ ಕೆ ಕೊಟ್ರೇಶ್, ಡಾ. ಶಶಿಧರ ಎಂ ಜಿ, ಹೆಚ್ ಎಸ್ ಸಿದ್ಧೇಶ್, ಯುವ ಸಮಿತಿಯ ಮುಸ್ತಫಾರಾಜ, ರೇಂಜರ್ ರಾಧಿಕಾ ಆರ್ ಎಚ್ ಮುಂತಾದವರು ಭಾಗವಹಿಸಿದ್ದರು. ಎ ಪಿ ಷಡಾಕ್ಷರಪ್ಪ ವಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Youth Empowerment and Sports ಸುತ್ತಮುತ್ತಲ ಪ್ರದೇಶದ ಸ್ಬಚ್ಛತೆ ನಮ್ಮ ಜವಾಬ್ದಾರಿ- ಶಾಸಕ ಚನ್ನಬಸಪ್ಪ

 Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು...

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...