Family Planning Association of India ಶಿವಮೊಗ್ಗ ನಗರದ ಮಲ್ಲೇಶ್ವರ ನಗದಲ್ಲಿರುವ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಶಾಖೆಯ ಸ್ವರ್ಣ ಸಂಭ್ರಮ ಜುಲೈ 27ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಭ್ರಮೋತ್ಸವ ಸಮಿತಿಯ ಚೇರ್ಮನ್ ಉಮೇಶ್ ಆರಾಧ್ಯ, ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ 27ರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ.
Family Planning Association of India ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸುವರು ಎಂದರು. ಮುಖ್ಯ ಅತಿಥಿಗಳಾಗಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಡಾ|| ರತ್ನಮಾಲಾ ದೇಸಾಯಿ ರಾಷ್ಟ್ರೀಯ ಪೂರ್ವಾಧ್ಯಕ್ಷ ಡಾ|| ಎಂ.ಎನ್, ತಾವರಗೇರಿ, ಪೂರ್ವ ಪ್ರಧಾನ ಕಾರ್ಯದರ್ಶಿ ಡಾ!! ಕೆ..ಶೇಷಗಿರಿರಾವ್ , ಮುಂಬೈನ ಎಫ್ ಪಿಎಐನ ಡೈರೆಕ್ಟರ್ ಜನರಲ್ ಡಾ!! ಕಲ್ಪನಾ ಅಷ್ಟೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ!! ಕೆ ಎಸ್ ನಟರಾಜ , ಕುಟುಂಬ ಕಲ್ಯಾಣಜಿಲ್ಲಾಧಿಕಾರಿ ಡಾ!! ವೆಂಕಟೇಶ್ ಆಗಮಿಸುವರೆಂದರು. ಅಧ್ಯಕ್ಷತೆಯನ್ನು ಎಚ್ ಆರ್ ಉಮೇಶ್ ಆರಾಧ್ಯ ವಹಿಸುವರು. ವಿಶ್ವ ಆರೋಗ್ಯ ಸಂಸ್ಥೆಯ ಉಪಸಮಿತಿಗೆ ನೇಮಕವಾದ ಡಾ!! ರತ್ನಮಾಲಾ ದೇಸಾಯಿ ಅವರನ್ನು ಗೌರವಿಸಲಾಗುವುದು ಎಂದರು.
